fbpx
ಸಮಾಚಾರ

IPL 14: RCB ತಂಡಕ್ಕೆ ಬಿಗ್ ರಿಲೀಫ್

14ನೇ ಆವೃತ್ತಿಯ ಐಪಿಎಲ್ ಮಹಾ ಸಮರಕ್ಕೆ ಸಜ್ಜಾಗಿರುವ ಆರ್.ಸಿ.ಬಿ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಕೊರೊನ ವೈರಸ್ ಕಾಟಕ್ಕೆ ತುತ್ತಾಗಿದ್ದ ಸ್ಟಾರ್ ಆಟಗಾರ ಸದ್ಯ ಚೇತರಿಸಿಕೊಂಡಿದ್ದು ಕೋವಿಡ್ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ವರದಿಯಾಗಿದೆ. ಹೌದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ ಅವರ ಕೋವಿಡ್‌-19 ಟೆಸ್ಟ್‌ ವರದಿ ನಗೆಟಿವ್‌ ಬಂದಿದ್ದು, ಅತಿ ಶೀಘ್ರದಲ್ಲಿಯೇ ಅವರು ತಂಡಕ್ಕೆ ಮರಳಲಿದ್ದಾರೆಂದು ವರದಿಗಳು ತಿಳಿಸಿವೆ.

 

 

ಕಳೆದ ಮಾರ್ಚ್ 22 ರಂದು ದೇವದತ್‌ ಪಡಿಕ್ಕಲ್‌ಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಬಿಸಿಸಿಐನ ಮಾರ್ಗಸೂಚಿಗಳ ಪ್ರಕಾರ ಐಸೋಲೇಷನ್‌ಗೆ ಒಳಗಾಗಿದ್ದರು. ಇದೀಗ ಪಡಿಕ್ಕಲ್ ಅವರ ಕೋವಿಡ್‌-19 ವರದಿ ನೆಗೆಟಿವ್‌ ಬಂದಿರುವುದರಿಂದ ಆರ್‌ಸಿಬಿ ತಂಡ ಮತ್ತು ನಾಯಕ ವಿರಾಟ್‌ ಕೊಹ್ಲಿ ಮೇಲಿನ ಒತ್ತಡ ಸ್ವಲ್ಪ ಕಡಿಮೆಯಾಗಿದೆ.

ಎಡಗೈ ಆಟಗಾರನ ಮತ್ತೊಂದು ಕೋವಿಡ್‌-19 ಟೆಸ್ಟ್‌ನ‌ ವರದಿ ನೆಗೆಟಿವ್‌ ಬಂದಿರುವುದರಿಂದ ಅವರು ಆರ್‌ಸಿಬಿ ತಂಡದ ಬಯೋ ಬಬಲ್‌ಗೆ ಒಳಗಾಗಲಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು‌ ವರದಿ ಮಾಡಿದೆ. ನಿಯಮದ ಪ್ರಕಾರ ಕ್ವಾರಂಟೈನ್ ಮುಗಿಸಿ RCB ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಆ ಮೂಲಕ ಮುಂಬೈ ಇಂಡಿಯನ್ಸ್ ವಿರುದ್ಧ ಏಪ್ರಿಲ್‌ 9ರಂದು ನಡೆಯುವ ಆರಂಭಿಕ ಪಂದ್ಯಕ್ಕೆ ದೇವದತ್‌ ಪಡಿಕ್ಕಲ್‌ ಫಿಟ್‌ ಆಗಲಿದ್ದಾರೆಂಬ ಅಂಶವನ್ನು ತನ್ನ ವರದಿಯಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top