fbpx
ಸಮಾಚಾರ

ನಕಲಿಗಳ ಆಟಕ್ಕೆ ಬ್ರೇಕ್: ಕೊನೆಗೂ ದಿಟ್ಟ ನಿರ್ಧಾರ ತೆಗೆದುಕೊಂಡ ರವಿಮಾಮ

ಕ್ರೇಜಿಸ್ಟಾರ್ ಸ್ಟಾರ್ ರವಿಚಂದ್ರನ್ ಅವರು ಅಭಿಮಾನಿಗಳಿಗೆ ಸರ್ಪ್ರೈಸ್ ಸಿಹಿ ಸುದ್ದಿಯೊಂದನ್ನ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ಸಾಮಾಜಿಕ ಜಾಲತಾಣಕ್ಕೆ ಕ್ರೇಜಿ ಸ್ಟಾರ್ ಎಂಟ್ರಿ ನೀಡುತ್ತಿದ್ದಾರೆ. ಅದಕ್ಕಾಗಿ ದಿನಾಂಕ ಕೂಡ ಫಿಕ್ಸ್​ ಮಾಡಿದ್ದು ಚಿಕ್ಕ ಟೀಸರ್​ ಮೂಲಕ ರವಿಚಂದ್ರನ್ ಅಭಿಮಾನಿಗಳ ಬಳಿ​ ನಿರೀಕ್ಷೆ ಮೂಡಿಸಿದ್ದಾರೆ.

 

 

ಏ.13ರಂದು ಯುಗಾದಿ ಹಬ್ಬದ ಪ್ರಯುಕ್ತ ಅವರು ಸೋಶಿಯಲ್​ ಮೀಡಿಯಾ ಖಾತೆಗಳನ್ನು ತೆರೆಯಲಿದ್ದಾರೆ. ರವಿಚಂದ್ರನ್ ಅವರು ಸೋಷಿಯಲ್ ಮೀಡಿಯಾಗಳಿಗೆ ಲಗ್ಗೆ ಇಡುತ್ತಿರುವ ಕುರಿತು ಪುಟ್ಟದೊಂದು ಟೀಸರ್ ರೂಪದ ವಿಡಿಯೋ ರಿಲೀಸ್ ಆಗಿದೆ. ಫಿಲ್ಮ್​ ಸ್ಟೈಲ್​ನಲ್ಲಿ ಸೂಚನೆ ನೀಡಿದ್ದಾರೆ. ನೆಟ್​ವರ್ಲ್ಡ್​ಗೆ ‘ಕಮಿಂಗ್​ ಸೂನ್​’ ಅಂತ 10 ಸೆಕೆಂಡ್​ ಟೀಸರ್​ ರಿವೀಲ್​ ಮಾಡಿದ್ದಾರೆ. ಇನ್ಮುಂದೆ ಡೈರೆಕ್ಟ್​ ಆಗಿ ಕ್ರೇಜಿಸ್ಟಾರ್​ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದು, ಸಿನಿಮಾದ ಬಗ್ಗೆ ಅಪ್​ಡೇಟ್​​ ಕೊಡ್ತಾರೆ.

ಕನ್ನಡದ ಬಹುತೇಕ ಸ್ಟಾರ್ ನಟರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ತಮ್ಮ ವೈಯಕ್ತಿಯ ಮತ್ತು ಸಿನಿಮಾ ವಿಚಾರಗಳನ್ನ ಹಂಚಿಕೊಳ್ಳುತ್ತಾರೆ. ಆದರೆ ರವಿಚಂದ್ರನ್ ಅವರು ಮಾತ್ರ ಈವರೆಗೂ ಸಾಮಾಜಿಕ ಜಾಲತಾಣಗಳ ಕಡೆ ಗಮನ ನೀಡಿತ್ತಿರಲಿಲ್ಲ.. ಕ್ರೇಜಿಸ್ಟಾರ್ ಸೋಷಿಯಲ್ ಮೀಡಿಯಾಗೆ ಬರಬೇಕು ಎಂಬುದು ಅಭಿಮಾನಿಗಳ ತುಂಬಾ ದಿನಗಳ ಆಸೆಯಾಗಿತ್ತು ಆ ಅಸೆ ಈಗ ಈಡೇರುತ್ತಿದೆ.

ರವಿಚಂದ್ರನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಇಲ್ಲದಿದ್ದರೂ ಕೂಡ ಅವರ ಹೆಸರಿನಲ್ಲಿ ಅನೇಕ ನಕಲಿ ಖಾತೆಗಳು ಹುಟ್ಟಿಕೊಂಡಿದ್ದವು. ಅವುಗಳನ್ನು ಸಾವಿರಾರು ಜನರು ಫಾಲೋ ಮಾಡುತ್ತಿದ್ದರು. ಹಾಗಾಗಿ ಕೆಲವೊಮ್ಮೆ ನೆಟ್ಟಿಗರಿಗೆ ಈ ವಿಚಾರದಲ್ಲಿ ಗೊಂದಲ ಆಗುತ್ತಿತ್ತು. ಸ್ವಲ್ಪ ಯಾಮಾರಿದರೆ ರವಿಚಂದ್ರನ್​ ಅಭಿಮಾನಿಗಳು ಕೂಡ ಈ ನಕಲಿ ಖಾತೆಗಳನ್ನು ನಂಬುವ ಪರಿಸ್ಥಿತಿ ಬರುತ್ತಿತ್ತು. ಆದರೆ ಈಗ ಸ್ವತಃ ರವಿಚಂದ್ರನ್​ ಅವರು ಅಧಿಕೃತ ಖಾತೆಗಳನ್ನು ಶುರು ಮಾಡುತ್ತಿರುವುದರಿಂದ ಇನ್ಮುಂದೆ ನಕಲಿ ಖಾತೆಗಳ ಆಟ ನಡೆಯುವುದಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top