fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿದ್ದುಕೊಂಡೇ ಕ್ಯಾನ್ಸರ್ ಪೀಡಿತರಿಗೆ ಸಹಾಯ ಮಾಡಿ ಸಾಮಾಜಿಕ ಕಳಕಳಿ ಮೆರೆದ ರಾಜೀವ್: ವ್ಯಾಪಕ ಮೆಚ್ಚುಗೆ

ಯಶಸ್ವಿ ಆರು ವಾರ ಮುಗಿಸಿ ಮುನ್ನುಗುತ್ತಿರುವ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ರಾಜೀವ್ ಪ್ರಬಲ ಸ್ಪರ್ದಿಗಳಲ್ಲಿ ಒಬ್ಬರು. ದೊಡ್ಮನೆಗೆ ಎಂಟ್ರಿ ಕೊಟ್ಟಾಗ ರಾಜೀವ್ ಕೊಂಚ ಉದ್ದ ತಲೆಗೂದಲನ್ನು ಬಿಟ್ಟಿದ್ದರು. ರಾಜೀವ್ ತಲೆಗೂದಲ ಮೇಲೆ ಎಲ್ಲರ ಕಣ್ಣಿತ್ತು. ಇದೀಗ ಏಕಾಏಕಿ ತಮ್ಮ ತಲೆಗೂದಲಿಗೆ ರಾಜೀವ್ ಕತ್ತರಿ ಹಾಕಿದ್ದಾರೆ. ತಮ್ಮ ಉದ್ದನೆಯ ಕೂದಲನ್ನು ಕತ್ತರಿಸಿ ಅದನ್ನು ಕ್ಯಾನ್ಸರ್ ಪೇಶೆಂಟ್ ಒಬ್ಬರಿಗೆ ದಾನ ಮಾಡಿದ್ದಾರೆ.

 

 

ಹೌದು ಈ ಬಗ್ಗೆ ಸ್ವತಃ ರಾಜೀವ್ ಅವರೇ ವಾರಾಂತ್ಯದ ಎಪಿಸೋಡ್ ನಲ್ಲಿ ಹೇಳಿದ್ದಾರೆ. ”ಒಬ್ಬ ಕ್ಯಾನ್ಸರ್ ಪೇಷೆಂಟ್‌ಗೆ ಕೂದಲು ಕೊಡಬೇಕು ಅಂತ ಅಂದುಕೊಂಡಿದ್ದೆ. ಅದು ನಿಮ್ಮ ಮುಖಾಂತರ ಅವರಿಗೆ ತಲುಪಲಿ. ಎರಡುವರೆ ವರ್ಷದಿಂದ ಕೂದಲು ಬೆಳೆಸಿದ್ದೆ. ಅದು ಅವರಿಗೆ ತಲುಪಿದರೆ ಖುಷಿ ಇರುತ್ತದೆ” ಎಂದು ಸುದೀಪ್‌ಗೆ ರಾಜೀವ್ ಹೇಳಿದರು. ಕ್ಯಾನ್ಸರ್ ಪೇಷೆಂಟ್‌ಗೆ ತಲೆಗೂದಲು ತಲುಪಿಸುವುದಾಗಿ ಕಿಚ್ಚ ಸುದೀಪ್ ಒಪ್ಪಿಕೊಂಡರು. ರಾಜೀವ್ ಕೈಗೊಂಡ ಈ ಒಳ್ಳೆಯ ನಡೆ ಕಿಚ್ಚ ಸುದೀಪ್‌ಗೆ ಇಷ್ಟವಾಯಿತು.

ಅಂದಹಾಗೆ ಕ್ಯಾನ್ಸರ್ ಬಂದಿರುವ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಕಿಮೋ ಥೆರಪಿ ಮಾಡಿದಾಗ ಸ್ವಲ್ಪ ಕೂದಲು ಹಾಳಾಗಿರುತ್ತದೆ. ಅಂಥವರಿಗಾಗಿ ವಿಗ್ ಮಾಡಿಸಿದಾಗ ನಾವು ನೈತಿಕವಾಗಿ ಬೆಂಬಲ ನೀಡುತ್ತೇವೆ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇದನ್ನು ಮಾಡುತ್ತಿದ್ದು, ಎಲ್ಲರೂ ಈ ರೀತಿ ಮಾಡಿದರೆ ಎಷ್ಟೋ ಜನರಿಗೆ ಉಪಯೋಗ ಆಗಲಿದೆ. ಹಾಗಾಗಿ ಅನೇಕರು ಉದ್ದವಾಗಿ ಬೆಳಸಿದ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ದಾನ ಮಾಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top