fbpx
ಸಮಾಚಾರ

ಮೈಕಲ್ ಜಾಕ್ಸನ್ ಮೂನ್‍ವಾಕ್ ಸ್ಟೆಪ್ ಹಾಕಿ ರಂಜಿಸಿದ ಕ್ರಿಸ್ ಗೇಲ್: ವಿಡಿಯೋ ನೋಡಿ

ಕ್ರಿಕೆಟ್ ಪ್ರಿಯರು ಎದುರುನೋಡುತ್ತಿರುವ ಬಹು ನಿರೀಕ್ಷಿತ ಐಪಿಎಲ್ 14ನೇ ಆವೃತ್ತಿಗೆ ಇನ್ನು ಕೇವಲ 1 ದಿನ ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲಾ 8 ತಂಡದ ಆಟಗಾರರು ಅಭ್ಯಾಸ ಆರಂಭಿಸಿದ್ದಾರೆ. ಹಾಗೆ ತಂಡಕ್ಕಾಗಿ ಆಡಲು ಬಂದಿರುವ ವಿದೇಶಿ ಆಟಗಾರರು ಕ್ವಾರಂಟೈನ್ ಮುಗಿಸಿ ಮೈದಾನಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಈ ನಡುವೆ ಪಂಜಾಬ್ ತಂಡದ ದೈತ್ಯ ಬ್ಯಾಟ್ಸ್ ಮ್ಯಾನ್ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ತಮ್ಮ ಕ್ವಾರಂಟೈನ್ ಅವಧಿ ಮುಗಿದ ಸಂಭ್ರಮಕ್ಕೆ ಮೈಕಲ್ ಜಾಕ್ಸನ್ ಅವರಂತೆ ಡ್ಯಾನ್ಸ್ ಮಾಡಿ ರಂಜಿಸಿದ್ದಾರೆ.

 

 

‘ಯುನಿವರ್ಸಲ್ ಬಾಸ್’ ಎಂದು ಕರೆಸಿಕೊಳ್ಳುವ ಕ್ರಿಸ್ ಗೇಲ್, ‘ಕಿಂಗ್ ಆಫ್ ಪಾಪ್’ ಖ್ಯಾತಿಯ ಮೈಕಲ್ ಜಾಕ್ಸನ್ ಅವರ ಜನಪ್ರಿಯ ‘ಸ್ಮೂತ್ ಕ್ರಿಮಿನಲ್’ ಸಾಂಗಿಗೆ ಸ್ಟೆಪ್ ಹಾಕಿದ್ದಾರೆ. ಜಾಕ್ಸನ್ ಅವರಂತೆ ಟೋಪಿ ಹಾಕ್ಕೊಂಡು ಹೆಜ್ಜೆ ಹಾಕುವ ಪ್ರಯತ್ನ ಮಾಡಿದ್ದಾರೆ. ಪಂಜಾಬ್‌ ಕಿಂಗ್ಸ್‌ ಟ್ವೀಟ್‌ನಲ್ಲಿ ಈ ವಿಡಿಯೋ ಹಾಕಿಕೊಂಡಿದೆ. ವಿಡಿಯೋ ಟ್ವೀಟ್ ಮಾಡಿರುವ ಪಂಜಾಬ್‌ ಕಿಂಗ್ಸ್‌, ‘ಕ್ವಾರಂಟೈನ್ ಮುಗಿಸಿ ನಿಮ್ಮ ನೆಚ್ಚಿನ ಆಟಗಾರ ಕ್ರಿಸ್ ಗೇಲ್ ಹೊರಗೆ ಬರುತ್ತಿದ್ದಾರೆ’ ಎಂದು ಬರೆದುಕೊಂಡಿದೆ.

ಅಂದಹಾಗೆ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಅತಿ ಹೆಚ್ಚು ಯಶಸ್ಸನ್ನು ಕಂಡಿರುವ ‘ಯೂನಿವರ್ಸ್ ಬಾಸ್’ ಖ್ಯಾತಿಯ ಗೇಲ್, ಈಗ ಪಂಜಾಬ್ ತಂಡದ ಪರ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಯುಎಇನಲ್ಲಿ ನಡೆದ ಟೂರ್ನಿಯಲ್ಲಿ 41 ವರ್ಷದ ಗೇಲ್, ಆಡಿರುವ ಏಳು ಪಂದ್ಯಗಳಲ್ಲಿ 41.14ರ ಸರಾಸರಿಯಲ್ಲಿ 288 ರನ್ ಕಲೆ ಹಾಕಿದ್ದರು. ಇದರಲ್ಲಿ ಗರಿಷ್ಠ 99 ರನ್ ಸೇರಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top