fbpx
ಸಮಾಚಾರ

ಮತ್ತೊಬ್ಬ RCB ಆಟಗಾರನಿಗೆ ಕೊರೋನಾ ಧೃಡ

ಹದಿನಾಲ್ಕನೇ ಆವೃತ್ತಿಯ ಐಪಿಎಲ್ ಮಹಾಸಮರಕ್ಕೆ ಇನ್ನೇನು ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿವೆ.. ಟ್ರೋಫಿ ಮೇಲೆ ಕಣ್ಣಿಟ್ಟಿರುವ ಎಲ್ಲಾ ತಂಡಗಳ ಅಭ್ಯಾಸ ಭರದಿಂದ ಸಾಗಿದೆ. ಈ ಮದ್ಯೆ ತಂಡಗಳಿಗೆ ಕೊರೋನಾ ಭೀತಿ ಎದುರಾಗಿದ್ದು ಒಬ್ಬೊಬ್ಬರೇ ಆಟಗಾರರು ಕೊರೋನಾ ವೈರಸ್ ಗೆ ಪಾಸಿಟಿವ್ ವರದಿಯಾಗುತ್ತಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಕೊರೋನಾ ಕಾಟ ತಟ್ಟಿದೆ.

 

 

ಇತ್ತೀಚಿಗೆ ತಂಡದ ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರಿಗೆ ಕೊರೋನಾ ಪಾಸಿಟಿವ್ ಆಗಿತ್ತು.. ಇದೀಗ ಆರ್ ಸಿಬಿ ತಂಡದ ಮತ್ತೊಬ್ಬ ಸ್ಟಾರ್ ಆಟಗಾರನಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿವೆ. ಹೌದು, RCB ತಂಡದ ಪರ ಆಡುತ್ತಿರುವ ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೆ ಕೊರೋನಾ ಪಾಸಿಟಿವ್ ಇರುವುದು ಕನ್ಫರ್ಮ್ ಆಗಿದೆ.. ಈ ವಿಚಾರವನ್ನು ಸ್ವತಃ ಆರ್ಸಿಬಿ ತಂಡವೇ ಖಚಿತಪಡಿಸಿದೆ.

 

 

ಈ ಬಗ್ಗೆ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಯಾಮ್ಸ್ ಆರೋಗ್ಯದ ಬಗ್ಗೆ ತಿಳಿಸಿದೆ “ಸೈಮ್ಸ್ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಹೇಳಿಕೆಯ ಪ್ರಕಾರ, ಸೈಮ್ಸ್ ಏಪ್ರಿಲ್ 3 ರಂದು ಚೆನ್ನೈಗೆ ಬಂದಿದ್ದಾರೆ ಈ ವೇಳೆ ಅವರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿ ಅವರಿಗೆ ವರದಿ ನೆಗೆಟಿವ್ ಬಂದಿತ್ತು. ಆದರೂ ಅವರು ಪ್ರಸ್ತುತ ಕ್ಯಾರೆಂಟೈನ್‌ನಲ್ಲಿದ್ದರು, ಆದರೆ ಬುಧವಾರ ಅವರ ಎರಡನೇ ಪರೀಕ್ಷೆಯ ವರದಿಯು ಪಾಸಿಟಿವ್​ ಎಂದು ಕಂಡುಬಂದಿದೆ. ನಂತರ ಅವರನ್ನು ವೈದ್ಯಕೀಯ ಕೇಂದ್ರದಲ್ಲಿ ಇರಿಸಲಾಗಿದೆ.” ಎಂದು ಆರ್ಸಿಬಿ ಮಾಹಿತಿ ನೀಡಿದೆ.

ಪಡಿಕ್ಕಲ್ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್
ಆರ್ಸಿಬಿ ಆಟಗಾರ ದೇವದತ್ ಪಡಿಕ್ಕಲ್ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಎಂದು ವರದಿಯಾಗಿದೆ. ಹೀಗಾಗಿ ಪಡಿಕ್ಕಲ್ ಶೀಘ್ರದಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆದ್ರೆ ಬಯೊ ಬಬಲ್ ನಿಯಮದ ಒಳಗಡೆ ಬರಲು, ಒಂದು ವಾರ ಬೇಕಾಗಿರುವದಿರಂದ ಮೊದಲ ಪಂದ್ಯವನ್ನ ಮಿಸ್ ಮಾಡಿಕೊಳ್ಳಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top