fbpx
ಸಮಾಚಾರ

ಶೂಟಿಂಗ್‍ ವೇಳೆ ಶ್ರೀಮುರಳಿಗೆ ಗಂಭೀರ ಗಾಯ: ಹಾಸಿಗೆ ವಿಶ್ರಾಂತಿಗೆ ವೈದ್ಯರ ಸೂಚನೆ

ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಶ್ರೀಮುರಳಿ ನಟನೆಯ ‘ಮದಗಜ’ ಚಿತ್ರದ ಸೆಟ್‌ನಲ್ಲಿ ಅವಘಡ ಸಂಭವಿಸಿದೆ.. ರಾತ್ರಿ ವೇಳೆ ರಾ ಶೈಲಿಯ ಫೈಟ್ ಸೀನ್ ಅನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಶ್ರೀಮುರಳಿ ಕಾಲಿಗೆ ಗಂಭೀರ ಏಟಾಗಿದೆ. ಸದ್ಯ ಶ್ರೀ ಮುರುಳಿ ಅವರಿಗೆ ವೈದ್ಯರು ಹದಿನೈದು ದಿನ ಬೆಡ್ ರೆಸ್ಟ್ ಗೆ ಸೂಚಿಸಿದ್ದಾರೆ.

 

 

ಕಾಲಿನ ಮಂಡಿ ಚಿಪ್ಪಿಗೆ ಸ್ವಲ್ಪ ಹಾನಿಯಾಗಿದೆ ಎಂದು ಮುರಳಿ ಅವರ ಆಪ್ತರು ತಿಳಿಸಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದೆ. ತಕ್ಷಣವೆ ಅವರನ್ನು ಸದಾಶಿವ ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಎಂಆರ್‌ಐ ಸ್ಕ್ಯಾನಿಂಗ್‌ ನಡೆಸಲಾಗಿದೆ. ಸದ್ಯ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು 15 ದಿನಗಳಲ್ಲಿ ಅವರು ಶೂಟಿಂಗ್‌ಗೆ ಮರಳಲಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ಮಹೇಶ್, ‘ಮಂಗಳವಾರ ರಾತ್ರಿ ನಮ್ಮ ‘ಮದಗಜ’ ಚಿತ್ರದ ಫೈಟ್ ಚಿತ್ರೀಕರಣದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿದ್ದರಿಂದ ಶ್ರೀಮುರಳಿ ಅವರ ಕಾಲಿನ ಮಂಡಿಗೆ ಸ್ವಲ್ಪ ಪೆಟ್ಟು ಬಿದ್ದಿದೆ. ಅವರ ಅಭಿಮಾನಿಗಳು ಯಾವುದೇ ರೀತಿಯ ಆತಂಕಪಡಬೇಕಾಗಿಲ್ಲ. ಶ್ರೀಮುರಳಿ ಅವರು ಬೇಗ ಗುಣಮುಖರಾಗುತ್ತಾರೆ’ ಎಂದು ಮಹೇಶ್ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top