fbpx
ಸಮಾಚಾರ

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್‌ಗೆ ಸೀಮಂತ ಸಂಭ್ರಮ: ಫೋಟೋಗಳನ್ನ ಹಂಚಿಕೊಂಡ ಗಾಯಕಿ

ಗಾಯಕಿ ಶ್ರೇಯಾ ಘೋಷಾಲ್​ ಬದುಕಿನಲ್ಲೀಗ ವಿಶೇಷ ಕಾಲಘಟ್ಟ. ಸದ್ಯ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಆಗಿರುವ ಶ್ರೇಯಾಗೆ ಸ್ನೇಹಿತರೆಲ್ಲ ಸೇರಿ ಬೇಬಿ ಶವರ್​ ಕಾರ್ಯಕ್ರಮ ಮಾಡಿದ್ದಾರೆ. ಇದರಿಂದ ಖುಷಿ ಆಗಿರುವ ಅವರು ಆ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

 

 

ಸ್ನೇಹಿತರು ದೂರದಿಂದಲೂ ನನ್ನನ್ನು ಮುದ್ದಿಸಲು ನಿರ್ಧರಿಸಿದ್ದಾರೆ. ಆನ್‍ಲೈನ್ ಮೂಲಕವಾಗಿ ಸೀಮಂತ ಆಚರಿಸಿದ್ದು, ತುಂಬಾ ಸರ್ಪ್ರೈಸ್ ಆಗಿತ್ತು. ಪ್ರತಿಯೊಬ್ಬರೂ ಏನನ್ನಾದರೂ ಬೇಯಿಸಿ, ಅಥವಾ ಕೈಯಿಂದ ಏನನ್ನಾದರೂ ತಯಾರಿಸಿ ಕಳುಹಿಸಿದ್ದಾರೆ. ಇದೆಲ್ಲ ತುಂಬಾ ಚೆನ್ನಾಗಿದೆ. ನಾನು ಎಷ್ಟು ಅದೃಷ್ಟ ಮಾಡಿದ್ದೇನೆ. ನಾನು ಈಗ ಯಾವುದೇ ಲಾಕ್‍ಡೌನ್, ಕಫ್ರ್ಯೂ ಇರಬಾದಿತ್ತು ಎಂದು ಎಂದು ಬಯಸುತ್ತೇನೆ. ನನ್ನ ಹುಡುಗಿಯರನ್ನು ಭೇಟಿಯಾಗುವುದನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡು ಇನ್‍ಸ್ಟಾಗ್ರಾಮ್ ಖಾತಯೆಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತಾಯಿಯಾಗುತ್ತಿರುವ ಶ್ರೇಯಾ ಘೋಶಾಲ್ ಸ್ನೇಹಿತರೊಂದಿಗೆ ಆನ್‍ಲೈನ್ ಮೂಲಕವಾಗಿ ಸೀಮಂತವನ್ನು ಆಚರಿಸಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತೀವೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top