fbpx
ಸಮಾಚಾರ

ಪಂಜಾಬ್ ನಾಯಕ ಕೆ.ಎಲ್ ರಾಹುಲ್ ದಿಢೀರ್ ಅಸ್ವಸ್ಥ: ಅಪೆಂಡಿಕ್ಸ್ ಸರ್ಜರಿಗಾಗಿ ಆಸ್ಪತ್ರೆಗೆ ದಾಖಲು

ಕಿಂಗ್ಸ್​ ಇಲೆವನ್ ಪಂಜಾಬ್​ ​ತಂಡದ ನಾಯಕ ಕೆ.ಎಲ್ ರಾಹುಲ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅನಾರೋಗ್ಯ ಕಾರಣದಿಂದಾಗಿ ಇಂದಿನ ಪಂದ್ಯದಲ್ಲಿ ಕೆ.ಎಲ್ ರಾಹುಲ್​ ಆಡುತ್ತಿಲ್ಲ ಎಂಬ ಮಾಹಿತಿ ಅಧಿಕೃತವಾಗಿ ಹೊರಬಿದ್ದಿದೆ. ಈ ವಿಚಾರ ತಂಡಕ್ಕೂ ದೊಡ್ಡ ಆಘಾತನೀಡಿದ್ದಲ್ಲದೆ, ಅಭಿಮಾನಿಗಳಿಗೂ ಬೇಸರ ತರಿಸಿದೆ.

 

 

ಕೆಎಲ್‌ ರಾಹುಲ್‌ ಅತೀವ ಹೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದು, ಶೀಘ್ರವೇ ಶಸ್ತ್ರಚಿಕಿತ್ಸೆಗೆ ಒಳಪಡಲಿದ್ದಾರೆ ಎಂದು ಪಂಜಾಬ್ ಫ್ರಾಂಚೈಸಿ ತನ್ನಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಹೊಟ್ಟೆ ನೋವು ಹೆಚ್ಚಾದ ಕಾರಣ ಎಮೆರ್ಜೆನ್ಸಿ ಘಟಕಕ್ಕೆ ದಾಖಲಿಸಲಾಗಿತ್ತು. ಕೆಲ ಪರೀಕ್ಷೆಗಳ ಬಳಿಕ ರಾಹುಲ್‌ ಅಪೆಂಡಿಕ್ಸ್ ಸಮಸ್ಯೆಗೆ ತುತ್ತಾಗಿರುವುದು ದೃಢಪಟ್ಟಿದೆ. ರಾಹುಲ್ ಅನಾರೋಗ್ಯ ಕುರಿತು ಪಂಜಾಬ್ ಕಿಂಗ್ಸ್ ಸಾಮಾಜಿಕ ಜಾಲತಾಣಧಲ್ಲಿ ಖಚಿತ ಪಡಿಸಿದೆ.

“ಕಳೆದ ರಾತ್ರಿ ಅತಿಯಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ಕೆಎಲ್‌ ರಾಹುಲ್ ತಿಳಿಸಿದರು. ಔಷಧಿಗಳಿಂದ ಗುಣವಾಗದೇ ಇದ್ದ ಕಾರಣ ಕೂಡಲೇ ತುರ್ತು ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ತಪಾಸಣೆ ನಂತರ ಅವರಿಗೆ ಅಕ್ಯೂಟ್‌ ಅಪೆಂಡಿಸೈಟಿಸ್‌ ಸಮಸ್ಯೆ ಎದುರಾಗಿರುವುದು ಬೆಳಕಿಗೆ ಬಂದಿದೆ. ಇದನ್ನು ಶಸ್ತ್ರಚಿಕಿತ್ಸೆ ಮೂಲಕ ಗುಣ ಪಡಿಸಬಹುದಾಗಿದ್ದು, ಇದೇ ಕಾರಣಕ್ಕೆ ಅವರನ್ನು ಎಲ್ಲಾ ಸುರಕ್ಷಿತ ಕ್ರಮಗಳೊಂದಿಗೆ ಬೇರೆ ಆಸ್ಪತ್ರೆಗೆ ವರ್ಗಾಯಿಸಲಾಗಿದೆ,” ಎಂದು ಪಂಜಾಬ್‌ ಕಿಂಗ್ಸ್ ತಂಡ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top