fbpx
ಸಮಾಚಾರ

ಬೆಂಗಳೂರಿನ ಕೋವಿಡ್ ರೋಗಿಗಳ ನೆರವಿಗೆ ಧಾವಿಸಿದ RCB ತಂಡ: ಆರ್ಥಿಕ ಸಹಾಯಕ್ಕೆ ನಿರ್ಧಾರ

ದೇಶಾದ್ಯಂತ ಕೊರೊನಾ ಎರಡನೇ ಅಲೆ ಉಂಟು ಮಾಡುತ್ತಿರುವ ಸಮಸ್ಯೆಗಳು ನಾಗರೀಕರನ್ನು ಬೆಚ್ಚಿ ಬೀಳಿಸಿವೆ. ಅದರಲ್ಲೂ ರಾಜ್ಯದಲ್ಲಿ ಸ್ಥಿತಿ ಚಿಂತಾಜನಕವಾಗಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಸಮಸ್ಯೆ ಹೆಚ್ಚಾಗಿದೆ. ಸಕಾಲದಲ್ಲಿ ರೋಗಿಗಳಿಗೆ ಆಕ್ಸಿಜನ್ ಸಿಗುತ್ತಿಲ್ಲ. ಇಂಥ ಸಮಯದಲ್ಲಿ ಹಲವಾರು ಮಂದಿ ಸಹಾಯ ಹಸ್ತ ಚಾಚಿದ್ದಾರೆ.. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋರೋಣ ಪೀಡಿತರ ನೆರವಿಗೆ ಧಾವಿಸಿದೆ.

 

 

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಆಕ್ಸಿಜನ್ ಸೇರಿದಂತೆ ಚಿಕಿತ್ಸೆಗೆ ಬೇಕಾದ ಸರಕನ್ನು ಸರಬರಾಜು ಮಾಡುವುದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆರ್ಥಿಕ ಸಹಾಯ ಮಾಡಲಿದೆ ಎಂದು ತಂಡದ ನಾಯಕ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

 

 

ನೀಲಿ ಜರ್ಸಿ ಧರಿಸಲಿರುವ ಆಟಗಾರರು:
ಆರ್ಥಿಕ ಸಹಾಯ ಮಾತ್ರವಲ್ಲದೆ ಆರ್ ಸಿಬಿ ಆಟಗಾರರು ಮುಂದಿನ ಒಂದು ಪಂದ್ಯದಲ್ಲಿ ನೀಲಿ ಜರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಪಿಪಿಇ ಕಿಟ್ ಧರಿಸಿ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಿ ಕೊರೊನಾ ವಾರಿಯರ್ಸ್ ಪಟ್ಟ ಶ್ರಮಕ್ಕೆ ಗೌರವ ಸಲ್ಲಿಸುವುದು ನೀಲಿ ಜರ್ಸಿಯ ಪ್ರಮುಖ ಉದ್ದೇಶವಾಗಲಿದೆ..

ಅಷ್ಟೇ ಅಲ್ಲದೆ ಆರ್‌ಸಿಬಿ ಬ್ಲೂ ಜೆರ್ಸಿಯನ್ನು ಆಟಗಾರರ ಆಟೋಗ್ರಾಫ್‌ನೊಂದಿಗೆ ಹರಾಜಿಗಿಡಲಿದ್ದು, ಆ ಹರಾಜಿನಲ್ಲಿ ಸಂಗ್ರಹವಾದ ಆರೋಗ್ಯ ಕ್ಷೇತ್ರದ ಅಭಿವೃದ್ದಿಗೆ ನೀಡಲು ಬೆಂಗಳೂರು ಮೂಲದ ಫ್ರಾಂಚೈಸಿ ನಿರ್ಧರಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top