fbpx
ಸಮಾಚಾರ

ಕೊರೋನಾಗೆ ಅರ್ಜುನ್ ಜನ್ಯಾ ಸಹೋದರ ಬಲಿ: ದುಃಖದಲ್ಲಿ ಮ್ಯಾಜಿಕಲ್ ಕಂಪೋಸರ್

ದೇಶದಲ್ಲಿ ಕೊರೋನಾ ಎರಡನೇ ಅಲೆ ತನ್ನ ರೌದ್ರನರ್ತನ ಮುಂದುವರೆಸಿದೆ. ಇನ್ನು ದಿನಕ್ಕೆ 3500ಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳ ಖ್ಯಾತನಾಮರೂ ಮಹಾಮಾರಿ ಕೊರೋನಾಗೆ ತುತ್ತಾಗುತ್ತಿದ್ದಾರೆ.. ಈ ಮದ್ಯೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಕೋವಿಡ್ ಗೆ ಬಲಿಯಾಗಿದ್ದಾರೆ.

 

 

ಅರ್ಜುನ್ ಜನ್ಯಾ ಅವರ ಸಹೋದರ ಕಿರಣ್ ಕೊರೋನಾದಿಂದ ನಿಧನ ಹೊಂದಿದ್ದಾರೆ.. ಕೆಲದಿನಗಳ ಹಿಂದೆಯಷ್ಟೇ ಕೋರೋಣ ಸೋಂಕಿಗೆ ತುತ್ತಾಗಿದ್ದ ಕಿರಣ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಿರಣ್ ಕೊನೆಯುಸಿರೆಳೆದಿದ್ದಾರೆ.

ಇನ್ನು ಸಹೋದರನ ಮರಣದ ವಿಚಾರವನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೇ ಬಹಿರಂಗ ಪಡಿಸಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.. “ಕೊರೋನಾದಿಂದಾಗಿ ನನ್ನ ಸಹೋದರನನ್ನು ಕಳೆದುಕೊಂಡೆ. ಕಿರಣ್, ನನ್ನ ಸಹೋದರ ನೀನಿಲ್ಲದೆ ನನ್ನ ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಉಸಿರಾಡುವವರೆಗೂ ನೀನು ನನ್ನ ಉಸಿರಾಟದಲ್ಲಿರುತ್ತೀಯ” ಎಂದು ಅರ್ಜುನ್ ಜನ್ಯ ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಸಹೋದರನ ಜೊತೆಯಿರುವ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top