fbpx
ಸಮಾಚಾರ

ಎರಡು ತಿಂಗಳಿಂದ ಮಂಡ್ಯಕ್ಕೆ ಕಾಲಿಡದ ಸಂಸದೆ ಸುಮಲತಾ: ವ್ಯಾಪಕ ಆಕ್ರೋಶ

ಮಂಡ್ಯ ಸಂಸದೆ ಎ.ಸುಮಲತಾ ಜಿಲ್ಲೆಯ ಕಡೆ ತಲೆ ಹಾಕಿ ಬರೋಬ್ಬರಿ 52 ದಿನಗಳಾಗಿವೆ. ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ನಂತರ ಸಂಸದೆ ಮಂಡ್ಯ ಜಿಲ್ಲೆಯ ಕಡೆ ಕಾಲಿಟ್ಟಿಲ್ಲ. ಹಾಗಾಗಿ ಸುಮಲತಾ ಅವರು ಜಿಲ್ಲೆಯಿಂದ ಕಾಣೆಯಾಗಿದ್ದಾರೆ ಎಂದು ಆರೋಪಿಸಿ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಸುಮಕ್ಕ ಎಲ್ಲಿದ್ದೀಯಕ್ಕಾ’ ಎಂಬ ಸಂದೇಶ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸುಮಕ್ಕಾ ಎಲ್ಲಿದ್ದೀಯಕ್ಕಾ ಎಂದು ಮಂಡ್ಯ ಜನತೆ ಸಾಮಾಜಿಕ ಜಾಲತಾಣದಲ್ಲಿ ಸುಮಲತಾ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಂಸದೆ ಸುಮಲತಾ ಮಾರ್ಚ್ 8 ರಂದು ಜಿಲ್ಲೆಗೆ ಭೇಟಿ ನೀಡಿದ್ದರು ಬಳಿಕ ಅತ್ತ ಕಡೆ ತಲೆ ಹಾಕಿಲ್ಲ. ಹೀಗಾಗಿ ಕಾಣೆಯಾಗಿದ್ದಾರೆ ಸ್ವಾಭಿಮಾನಿ ಸಂಸದೆ. ಕೊರೊನಾದಿಂದ ಮಂಡ್ಯದ ಜನತೆ ಪರದಾಡುತ್ತಿರುವಾಗ ಎರಡು ತಿಂಗಳಿನಿಂದ ಮಂಡ್ಯಕ್ಕೆ ಕಾಲಿಡದ ಸಂಸದೆ. ಸುಮಕ್ಕಾ ಎಲ್ಲೀದ್ದಿಯಕ್ಕಾ ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ.

ಸುಮಲತಾ ಕಾಣೆಯಾಗಿದ್ದಾರೆ, ಸಂಸದರನ್ನು ಹುಡುಕಿಕೊಡಿ ಎಂಬ ಶೀರ್ಷಿಕೆಯೊಂದಿಗೆ ಸಂದೇಶ ಪ್ರಕಟಿಸುತ್ತಿದ್ದಾರೆ. ‘ಸುಮಲತಾ ಅವರು ಮತಕ್ಕಾಗಿ ಸೆರಗೊಡ್ಡಿ ಬೇಡಿಕೊಂಡಿದ್ದರು. ಈಗ ಕ್ಷೇತ್ರಕ್ಕೆ ಬರುವಂತೆ ಜನರು ಸೆರಗೊಡ್ಡಿ ಬೇಡಿಕೊಳ್ಳಬೇಕಾಗಿದೆ’ ಎಂಬ ಸಂದೇಶಗಳು ಹರಿದಾಡುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top