fbpx
ಸಮಾಚಾರ

ಆರ್‌ ಅಶ್ವಿನ್ ಕುಟುಂಬದ 10 ಸದಸ್ಯರಿಗೆ ಸೋಂಕು! ಕೊರೋನಾ ನರಕ ದರ್ಶನ ಮಾಡಿಸಿದ ಅಶ್ವಿನ್ ಪತ್ನಿ

ಕ್ರಿಕೆಟಿಗ ಆರ್​ ಅಶ್ವಿನ್​ ಕುಟುಂಬದ 10 ಮಂದಿ ಕೋವಿಡ್​ ಸೋಂಕಿಗೆ ತುತ್ತಾಗಿದ್ದಾರೆ. ಮಕ್ಕಳು ಸೇರಿದಂತೆ 10 ಮಂದಿ ಸೋಂಕಿನ ವಿರುದ್ಧ ಹೋರಾಡಿದ ಕುರಿತು ಸ್ಪೀನ್​ ಮಾಂತ್ರಿಕ ಅಶ್ವಿನ್​ ಹೆಂಡತಿ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ

ಭಾರತದಲ್ಲಿ ಕೊರೋನಾ ವೈರಸ್ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣಕ್ಕೇನೆ ಭಾರತದಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಿಂದ ಒಂದಿಷ್ಟು ಪ್ರಮುಖ ಕ್ರಿಕೆಟಿಗರು ಹಿಂದೆ ಸರಿದಿದ್ದರು. ಅವರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆರ್‌ ಅಶ್ವಿನ್ ಕೂಡ ಒಬ್ಬರಾಗಿದ್ದರು.

 

 

ಅಶ್ವಿನ್ ಪತ್ನಿ ಪ್ರೀತಿ ನಾರಾಯಣನ್ ಕೋವಿಡ್‌ ಸೋಂಕು ಕುಟುಂಬಸ್ಥರನ್ನು ಭೀತಿಗೆ ತಳ್ಳಿರುವ ಬಗೆಯನ್ನು ಹೇಳಿಕೊಂಡಿದ್ದಾರೆ. ಮನೆಯ 10 ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದಿದ್ದರಿಂದ ಈ ವಾರ ‘ಭಯಾನಕ ವಾರ’ವಾಗಿ ಕಾಣಿಸಿದೆ ಎಂದು ಪ್ರೀತಿ ಹೇಳಿದ್ದಾರೆ.

ಅಷ್ವಿನ್ ಪತ್ನಿ ಟ್ವೀಟ್:
ಕಳೆದೊಂದು ವಾರದಲ್ಲಿ ತಮ್ಮ ಕುಟುಂಬ ಅನುಭವಿಸಿದ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ಒಂದೇ ವಾರದಲ್ಲಿ 6 ವಯಸ್ಕರು ಹಾಗೂ 4 ಮಕ್ಕಳಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಎಲ್ಲರೂ ವಿವಿಧ ನಗರಗಳ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದಷ್ಟು ಎಲ್ಲರೂ ಕೋವಿಡ್ ಲಸಿಕೆ ಪಡೆದುಕೊಳ್ಳಿ. ಇದೊಂದೆ ಕೋವಿಡ್ ವಿರುದ್ದ ಹೋರಾಡುವ ಅಸ್ತ್ರ ಎಂದು ಪ್ರೀತಿ ಕರೆಕೊಟ್ಟಿದ್ದಾರೆ.

ನನಗನಿಸುತ್ತೆ, ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ. ಕಳೆದ 5 ರಿಂದ 8 ದಿನಗಳು ನನ್ನ ಪಾಲಿಗೆ ಅತ್ಯಂತ ಕ್ಲಿಷ್ಟಕರವಾಗಿತ್ತು. ಎಲ್ಲರೂ ಇದ್ದೂ, ಎಲ್ಲಾ ರೀತಿಯ ಸಹಾಯ ಮಾಡಿದರೂ, ಯಾರೊಬ್ಬರು ಜತೆಗಿರಲಿಲ್ಲ. ಇದೊಂದು ಅತ್ಯಂತ ಕೆಟ್ಟ ಐಸೋಲೆಷನ್‌ ರೋಗ ಎಂದು ಪ್ರೀತಿ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top