fbpx
ಸಮಾಚಾರ

ಬ್ರೇಕಿಂಗ್ ನ್ಯೂಸ್: ಸಂಪೂರ್ಣ ಐಪಿಎಲ್ ಪಂದ್ಯಾವಳಿ​ ರದ್ದು: ಈ ಬಾರಿಯ ಕಪ್ ಯಾರಿಗೂ​ ಇಲ್ಲ!

14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಮತ್ತೊಮ್ಮೆ ಕೊರೋನಾ ಮಹಾ ಕಂಟಕ ಎದುರಾಗಿದ್ದು ಈ
ಟೂರ್ನಿಮೆಂಟ್ ಅರ್ಧಕ್ಕೆ ಮೊಟಕುಗೊಂಡಿದೆ. ಐಪಿಎಲ್​ನಲ್ಲಿ ಹಲವು ಆಟಗಾರರಿಗೆ ಮತ್ತು ಸಪೋರ್ಟ್​ ಸ್ಟಾಫ್​ಗೆ ಸೋಂಕು ತಗುಲಿದ ಬೆನ್ನಲ್ಲೇ ಐಪಿಎಲ್​-2021 ಟೂರ್ನಿಯನ್ನು ಬಿಸಿಸಿಐ ರದ್ದು ಮಾಡಿದೆ. ಈ ಬಗ್ಗೆ ಬಿಸಿಸಿಐ ಉಪ ನಿರ್ದೇಶಕ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಜೊತೆಗೆ ಆಟಗಾರರು ಸೇರಿದಂತೆ 7 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇಬ್ಬರು ಆಟಗಾರರಿಗೆ ಕೊರೊನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ನಿನ್ನೆ ನಡೆಯಬೇಕಾಗಿದ್ದ ಆರ್‍ಸಿಬಿ ನಡುವಿನ ಪಂದ್ಯವನ್ನು ರದ್ದು ಮಾಡಲಾಗಿತ್ತು. ಕೋಲ್ಕತ್ತಾದ ಇಬ್ಬರು ಆಟಗಾರರಿಲ್ಲಿ ಕೊರೊನಾ ಸೋಂಕು ಕಂಡು ಬಂದಿತ್ತು. ಇನ್ನು ಇಂದು ಕೂಡ ಅಮಿತ್ ಮಿಶ್ರ ಮತ್ತು ವೃದ್ಧಿಮಾನ್ ಸಹಾ ಆವರಿಗೆ ಕೋವಿಡ್ ಸೋಂಕು ಬಂದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top