fbpx
ಸಮಾಚಾರ

ಅಪ್ಪನ ಫೋಟೋ ಜೊತೆ ಜೂ.ಚಿರು ಆಡುತ್ತಿರುವ ವಿಡಿಯೋ ಹಂಚಿಕೊಂಡ ಮೇಘನಾ: ವಿಡಿಯೋ ವೈರಲ್

ಕಳೆದ ವರ್ಷ ಪತಿಯ ಅಗಲಿಕೆ ಬಳಿಕ ಮೇಘನಾ ಬದುಕಿನಲ್ಲಿ ಹೊಸ ಭರವಸೆಯ ರೂಪದಲ್ಲಿ ಬಂದಿದ್ದು ಅವರ ಪುತ್ರ. ಮುದ್ದಿನ ಕಂದನನ್ನು ಜ್ಯೂನಿಯರ್ ಚಿರು ಎಂದೇ ಅಭಿಮಾನಿಗಳಿಗೆ ಮೇಘನಾ ಪರಿಚಯಿಸಿದ್ದಾರೆ. ಮೇಘನಾ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಗಮನ ಸೆಳೆಯುತ್ತಿದೆ.

 

 

ವಿಡಿಯೋ ಹಂಚಿಕೊಂಡ ಮೇಘನಾ ರಾಜ್
ನಟಿ ಮೇಘನಾ ರಾಜ್ ಒಂದು ಸ್ಪೆಷಲ್ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಂದೆ ಚಿರಂಜೀವಿ ಸರ್ಜಾ ಫೋಟೋವನ್ನು ಮಗ ಜೂನಿಯರ್ ಚಿರು ನೋಡುತ್ತಿರುವ ವಿಡಿಯೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

ಮೇಘನಾ ರಾಜ್​ ಅವರು ಚಿರಂಜೀವಿ ಸರ್ಜಾ ಫೋಟೋವನ್ನು ಮಗನಿಗೆ ತೋರಿಸುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ‘ಅಪ್ಪನ್ನ ನೋಡಲ್ಲಿ..’ ಎಂದು ಮೇಘನಾ ಹೇಳಿದಾಗ ಚಿರು ಭಾವಚಿತ್ರವನ್ನು ಜ್ಯೂ. ಚಿರು ಸ್ಪರ್ಶಿಸುತ್ತಾನೆ. ಆತನ ಕ್ಯೂಟ್​ ಎಕ್ಸ್​ಪ್ರೆಷನ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top