fbpx
ಸಮಾಚಾರ

ಬಳ್ಳಾರಿ ಬಾಲಯ್ಯ ವಿಧಿವಶ; ಕೊರೊನಾ ಸೋಂಕಿಗೆ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಅಭಿಮಾನಿ ಬಲಿ

ದೇಶಕ್ಕೆ ಹೆಮ್ಮಾರಿಯಂತೆ ಅಪ್ಪಳಿಸಿರುವ ಕೊರೋನಾ ವೈರಸ್ ನಿಂದಾಗಿ ದೇಶದ ಲಕ್ಷಾಂತರ ಮಂದಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದಾರೆ.. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಔಷಧಿಗಳ ಸರಿಯಾದ ವ್ಯವಸ್ಥೆ ಇಲ್ಲದೆ ಜನರು ಪ್ರಾಣ ಬಿಡುತ್ತಿದ್ದಾರೆ. ಈ ಮದ್ಯೆ ಕೊರೊನಾ ಸೋಂಕಿಗೆ ತೆಲುಗಿನ ಖ್ಯಾತ ನಟ ಬಾಲಕೃಷ್ಣ ಅವರ ಅಪ್ಪಟ ಅಭಿಮಾನಿ ಬಲಿಯಾಗಿದ್ದಾರೆ.

ಬಾಲಕೃಷ್ಣರಂತೆಯೇ ವೇಷಭೂಷಣಗಳೊಂದಿಗೆ ಅವರನ್ನೇ ಹೋಲುವ ಅಪ್ಪಟ ಅಭಿಮಾನಿಯೊಬ್ಬರು ಇದ್ದು, ಅವರನ್ನು ಬಳ್ಳಾರಿ ಬಾಲಯ್ಯ ಎಂದೇ ಕರೆಯಲಾಗುತ್ತಿತ್ತು. ಸದ್ಯ ಜೂನಿಯರ್ ಬಾಲಯ್ಯ, ಬಳ್ಳಾರಿ ಬಾಲಯ್ಯ ಎಂದೇ ಕರೆಸಿಕೊಳ್ಳುತ್ತಿದ್ದ ವೆಂಕಟೇಶ್ವರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊವಿಡ್ ಸೋಂಕಿಗೆ ಒಳಗಾಗಿದ್ದ ವೆಂಕಟೇಶ್ವರ್ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ‌ ನಿನ್ನೆ ಮೃತಪಟ್ಟಿದ್ದಾರೆ. ಬಳ್ಳಾರಿಯ ಮಿಲ್ಲರ್ ಪೇಟೆ ನಿವಾಸಿಯಾಗಿದ್ದ ವೆಂಟಕೇಶ್ವರ್ ಅವರಿಗೆ ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರನಿದ್ದಾರೆ. ಸಿನಿಮಾದಲ್ಲಿ ಬಾಲಕೃಷ್ಣ ಧರಿಸಿರುವ ವೇಷ ಭೂಷಣಗಳ ಮಾದರಿಯಲ್ಲಿಯೇ ವೆಂಕಟೇಶ್ವರ್ ಉಡುಪು ಧರಿಸಿ ಎಲ್ಲರ ಗಮನ ಸೆಳೆಯುತ್ತಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top