fbpx
ಸಮಾಚಾರ

ಕೊರೋನಾಗೆ ಬಲಿಯಾದ ಬಿಗ್ ಬಾಸ್ ಸ್ಪರ್ಧಿಯ ಸಹೋದರ

ಹಿಂದಿ ಕಿರುತೆರೆಯ ಬಿಗ್ ಬಾಸ್ 14 ಖ್ಯಾತಿಯ ನಿಕ್ಕಿ ತಂಬೋಲಿಯ ಸಹೋದರ ಜತಿನ್ ತಂಬೋಲಿ ಕೋವಿಡ್ -19 ರ ಕಾರಣದಿಂದಾಗಿ ಮೇ 4 ರಂದು ನಿಧನರಾಗಿದ್ದಾರೆ. ನಿಕ್ಕಿ ತನ್ನ ಸಹೋದರನ ಚಿತ್ರಗಳನ್ನು ಭಾವನಾತ್ಮಕ ಪತ್ರದೊಂದಿಗೆ ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾಳೆ.

 

 

ನಿಕ್ಕಿ ತಂಬೋಲಿ ತನ್ನ ಸಹೋದರ ಜತಿನ್ ಅವರ ಫೋಟೋಗಳನ್ನು ಇನ್ಸ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಮತ್ತು “ಈ ಬೆಳಗ್ಗೆ ದೇವರು ನಿನ್ನ ಹೆಸರನ್ನು ಕರೆಯಲಿದ್ದಾನೆ ಎಂದು ನಮಗೆ ತಿಳಿದಿರಲಿಲ್ಲ.. ನಾವು ನಿನ್ನನ್ನು ಬಹಳ ಪ್ರೀತಿಸುತ್ತೇವೆ. ನಿನ್ನ ಸಾವು ನಮ್ಮ ಹೃದಯ ಚೂರು ಮಾಡಿದೆ.” ಎಂದು ಬರೆದುಕೊಂಡಿದ್ದಾರೆ.

ಇತ್ತೀಚಿಗೆ ತಮ್ಮ ಸಹೋದರ ಜತಿನ್ ಗೆ ಕೋವಿಡ್ ತಗುಲಿರುವ ಬಗ್ಗೆ ಮಾಹಿತಿ ನೀಡಿದ್ದ ನಿಕ್ಕಿ ಅವರು ಆತನ ಚೇತರಿಕೆಗಾಗಿ ಪ್ರಾರ್ಥನೆ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲದೆ ಜತಿನ್ ಬಹು ಬೇಗ ಹುಷಾರಾಗಲಿ ಎಂದು ತಮ್ಮ ನಿವಾಸದಲ್ಲಿ ವಿಶೇಷ ಹೋಮ,ಪೂಜೆಯನ್ನು ಕೂಡ ಮಾಡಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top