fbpx
ಸಮಾಚಾರ

ಬೆಡ್ ಹಗರಣಕ್ಕೆ ಕೋಮು ಬಣ್ಣ ಬಳಿಯುವ ಪ್ರಯತ್ನ: ತೇಜಸ್ವಿ ಸೂರ್ಯಗೆ ಸಂಕಷ್ಟ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್​ ಸಿಗದಿರುವುದಕ್ಕೆ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಇರುವುದಕ್ಕೆ ಬೆಡ್ ಬ್ಲಾಕಿಂಗ್ ದಂಧೆಯೇ ಕಾರಣ ಎಂದು ಭಾರೀ ಅಕ್ರಮವನ್ನು ಹೊರಗೆಳೆದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ವಿರುದ್ಧ ದೂರು ದಾಖಲಾಗಿದೆ.

ಜೆಡಿಎಸ್ ಪಕ್ಷದ ಸ್ಟೇಟ್ ಕಮಿಟಿ ಅಬ್ಸರ್ವರ್ ನಜ್ಮಾ ನಜೀರ್ ಭಾನು ಎಂಬುವವರು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್‌ಗೆ ದೂರು ನೀಡಿದ್ದಾರೆ. ಕೋಮುದ್ವೇಷದ ಮಾತುಗಳನ್ನಾಡಿರುವ ಜನಪ್ರತಿನಿಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಏನಿದು ಘಟನೆ:
ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ವಾರ್​ ರೂಮ್​ನಲ್ಲಿರುವವರೆ ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ 16 ಜನ ಮುಸ್ಲಿಂ ನೌಕರರ ಹೆಸರನ್ನು ಓದಿದ್ದರು. ಇಷ್ಟಕ್ಕೆ ಸುಮ್ಮನಾಗದ ತೇಜಸ್ವಿ ಸೂರ್ಯ ಇದೇನು ಮದರಸಾ, ಹಜ್ ಕಮಿಟೀನ ಅಥವಾ ಬಿಬಿಎಂಪಿ ಕಚೇರಿಯಾ? ಎಂದು ಪ್ರಶ್ನೆ ಮಾಡುವ ಮೂಲಕ ಕೊರೋನಾ ಸಂದರ್ಭದಲ್ಲೂ ಕೋಮು ಸೌಹಾರ್ದ ಕದಡುವ ಕೆಲಸಕ್ಕೆ ಮುಂದಾಗಿದ್ದರು.

ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿಯ ‘ಬೆಡ್ ಬ್ಲಾಕಿಂಗ್’ ಹಗರಣ ಬಯಲಿಗೆಳೆಯುವ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ 206 ಸಿಬ್ಬಂದಿಗಳ ಪೈಕಿ ಕೇವಲ 17 ಮಂದಿ ಮುಸ್ಲಿಮರ ಹೆಸರುಗಳನ್ನಷ್ಟೆ ಹೇಳಿ ‘ಮದರಸಾ ನಡೆಸುತ್ತಿದ್ದೀರಾ?’ ಎಂದು ಪ್ರಶ್ನೆ ಮಾಡಿದ್ದರು. ಭ್ರಷ್ಟಾಚಾರಕ್ಕೆ ಧರ್ಮದ ಬಣ್ಣ ಬಳಿದುದ್ದಕ್ಕೆ ತೇಜಸ್ವಿ ಸೂರ್ಯ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top