fbpx
ಸಮಾಚಾರ

“ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ” ಶಂಖನಾದ ಸಾವಿಗೆ ಜಗ್ಗೇಶ್ ಕಂಬನಿ!

ದೇಶದಲ್ಲಿ ಕೊರೋನಾ ಎರಡನೇ ಅಲೆ ತನ್ನ ರೌದ್ರನರ್ತನ ಮುಂದುವರೆಸಿದೆ. ಇನ್ನು ದಿನಕ್ಕೆ 3500ಕ್ಕೂ ಹೆಚ್ಚು ಜನರು ಮೃತಪಡುತ್ತಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರಗಳ ಖ್ಯಾತನಾಮರೂ ಮಹಾಮಾರಿ ಕೊರೋನಾಗೆ ತುತ್ತಾಗುತ್ತಿದ್ದಾರೆ.. ಈ ಮದ್ಯೆ ಬೆಟ್ಟದ ಹೂ ಸಿನಿಮಾ ಖ್ಯಾತಿಯ ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿಯಾಗಿದ್ದಾರೆ.

 

 

70 ವರ್ಷ ವಯಸ್ಸಿನ ಶಂಖನಾದ ಅರವಿಂದ್‌ ಕಳೆದ ಕೆಲ ದಿನಗಳ ಹಿನೆ ಕೊರೋನಾ ಸೋಂಕು ತಗುಲಿತ್ತು. ಕಳೆದ ಹತ್ತು ದಿನಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಮೇ 7, 2021ರಂದು ಕೊನೆಯುಸಿರೆಳೆದರು. ಜನವರಿ 23ರಂದು ಅರವಿಂದ್ ಪತ್ನಿ ರಮಾ ಕೂಡ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದ್ದರು.

ಹಿರಿಯ ನಟ ಶಂಖನಾದ ಅರವಿಂದ್​ ಅವರ ಅಗಲಿಕೆಗೆ ಕಂಬನಿ ಮಿಡಿದು ನಟ ಜಗ್ಗೇಶ್​ ಅವರು ಸಾಮಾಜಿಕ ಜಾಲತಾಣದಲ್ಲಿ ನೋವಿನಿಂದ ಪೋಸ್ಟ್​ ಮಾಡಿದ್ದಾರೆ. ಏನೆಂದು ಬರೆಯಲಿ, ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ? ಯಾವ ಅಕ್ಷರದಿಂದ ಇವರ ಮನೆಯ ನೊಂದವರನ್ನು ಸಮಾಧಾನ ಪಡಿಸಲಿ? ಒಂದಂತೂ ಹೇಳುವೆ ನಿಮ್ಮಗಳ ಜೊತೆ ನಾನು ಕಳೆದ ಸಮಯ ಮಾತ್ರ ಅವಿಸ್ಮರಣೀಯ ಎಂದು ಬರೆದುಕೊಂಡಿದ್ದಾರೆ.

70-80ರ ದಶಕದಲ್ಲಿ ಅರವಿಂದ್ ಬಹು ಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ಕಾಶಿನಾಥ್ ಸಿನಿಮಾಗಳ ಮೂಲಕ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದರು. ಇತ್ತೀಚಿಗೆ ಕನ್ನಡದ ಕೆಲವೊಂದು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದರು. ಕನ್ನಡ ಚಿತ್ರರಂಗ ಒಳ್ಳೆ ಕಲಾವಿನದನ್ನು ಇಂದು ಕಳೆದುಕೊಂಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top