fbpx
ಸಮಾಚಾರ

ಕೊರೋನಾದಿಂದ ತಂದೆಯನ್ನು ಕಳ್ಕೊಂಡ ಬೆಂಗಳೂರಿನ ಬಾಲಕನ ಬಾಳಿಗೆ ಬೆಳಕಾದ ನಟ ಸಲ್ಮಾನ್ ಖಾನ್

ಪ್ರಸ್ತುತ ನಡೆಯುತ್ತಿರುವ COVID-19 ಎರಡನೇ ಅಲೆಯೊಂದಿಗೆ ಹೋರಾಡುತ್ತಿರುವ ಮುಂಚೂಣಿ ಕಾರ್ಮಿಕರಿಗೆ ನಿರಂತರವಾಗಿ ಸಹಾಯ ಮಾಡುತ್ತಿರುವ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಈಗ ಕರ್ನಾಟಕದ ಬಾಲಕನಿಗೆ ಸಹಾಯ ಮಾಡಿದ್ದಾರೆ. ಬಾಲಕನ ತಂದೆ ಕೊರೋನದಿಂದ ಸಾವನ್ನಪ್ಪಿದ್ದಾರೆ.

ಬಾಲಕನ ಮನೆಗೆ ರೇಷನ್ ಹಾಗೂ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲವನ್ನು ಒದಗಿಸಿಕೊಟ್ಟಿದ್ದಾರಂತೆ. ಇದು ಕೇವಲ ತಾತ್ಕಾಲಿಕ ನೆರವು ಅಲ್ಲ, ಬದಲಾಗಿ ಆ ಬಾಲಕನ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಸಲ್ಮಾನ್ ಖಾನ್, ಅವನ ಶಿಕ್ಷಣದ ಸಂಪೂರ್ಣ ಹೊಣೆ ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ. ಮುಂದಿನ ದಿನಗಗಳಲ್ಲಿ ಅವನಿಗೆ ಅಗತ್ಯವೆನ್ನಿಸುವ ಎಲ್ಲವನ್ನೂ ನೀಡುವುದಾಗಿ ಭರವಸೆ ನೀಡಿದ್ದಾರೆ.

ಅಂದಹಾಗೆ ಕೋವಿಡ್ ಸಂದರ್ಭ ಸಲ್ಮಾನ್ ಖಾನ್ ಅವರು ನಡೆಸುತ್ತಿರುವ ಸಮಾಜ ಸೇವೆ ಕಾರ್ಯಗಳಿಗೆ ಬೆಂಬಲವಾಗಿ ರಾಹುಲ್ ನಿಂತಿದ್ದಾರೆ. ಸಲ್ಮಾನ್ ಅವರು 5,000 ಫ್ರಂಟ್ ಲೈನ್ ಕಾರ್ಯಕರ್ತರಿಗೆ ನೆರವಾಗಿದ್ದಾರೆ. ವೈದ್ಯಕೀಯ ಸವಲತ್ತು, ಆಕ್ಸಿಜನ್ ಸಿಲಿಂಡರ್ ಹಾಗೂ ಆಹಾರ ಪ್ಯಾಕೆಟ್‍ಗಳನ್ನು ಅಗತ್ಯವಿದ್ದವರಿಗೆ ದೇಣಿಗೆ ನೀಡಿದ್ದಾರೆ ಎಂದು ರಾಹುಲ್ ಮಾಹಿತಿ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top