fbpx
ಸಮಾಚಾರ

ಸಹೋದರನ ಆತ್ಮಹತ್ಯೆ ದುಃಖ ಮಾಸುವ ಮುನ್ನ ಚೇತನ್ ಸಕಾರಿಯಾ ತಂದೆ ಕೊರೋನಾಗೆ ಬಲಿ

ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಸ್ಥಗಿತಗೊಂಡಿದೆ. ಇತ್ತ ಐಪಿಎಲ್ ಆಟಗಾರರು ತಮ್ಮ ಮನೆಗೆ ತೆರಳಿ ಕ್ವಾರಂಟೈನ್ ಆಗಿದ್ದಾರೆ. ಆದರೆ ಮನಗೆ ವಾಪಸ್ ಬಂದ ರಾಜಸ್ಥಾನ ರಾಯಲ್ಸ್ ತಂಡದ ಯುವ ವೇಗಿ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಕೊರೋನಾ ಸೋಂಕಿನಿಂದ ಆಸ್ಪತ್ರೆ ದಾಖಲಾಗಿದ್ದ ವೇಗಿ ತಂದೆ ನಿಧನರಾಗಿದ್ದಾರೆ.

 

 

ಚೇತನ್ ಸಕಾರಿಯಾ ಅವರ ತಂದೆ ಕೊರೋನಾವೈರಸ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಫ್ರ್ಯಾಂಚೈಸ್ ತನ್ನ ಟ್ವಿಟರ್ ಖಾತೆಯಲ್ಲಿ ಭಾನುವಾರ ತಿಳಿಸಿದೆ.

“ಕಾಂಜಿಭಾಯ್ ಸಕಾರಿಯಾ ಅವರು ಇಂದು ಕೋವಿಡ್ -19 ರೊಂದಿಗಿನ ಹೋರಾಟದಲ್ಲಿ ಸೋತು ಸಾವನ್ನಪ್ಪಿದ್ದಾರೆ ಎಂದು ಹೇಳಲು ನಮಗೆ ತುಂಬಾ ದುಃಖವಾಗುತ್ತಿದೆ.ನಾವು ಚೇತನ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತೇವೆ” ಎಂದು ಆರ್.ಆರ್. ಟ್ವೀಟ್ ಮಾಡಿದೆ.

ಕಳೆದ ಕೆಲದಿನಗಳಿಂದ ಚೇತನ್ ಸಕಾರಿಯಾ ತಂದೆ ಕೊರೋನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆ ಬಿಲ್ ಪಾವತಿಸುವಂತೆ ಆಡಳಿತ ಮಂಡಲಿ ಚೇತನ್ ಸಕಾರಿಯಾ ಕುಟುಂಬಸ್ಥರಿಗೆ ಸೂಚನೆ ನೀಡಿತ್ತು. ಇತ್ತ ಐಪಿಎಲ್ ಟೂರ್ನಿಯ ಮೊದಲ ಕಂತಿನ ವೇತ ಪಡೆದ ಬೆನ್ನಲ್ಲೇ ಚೇತನ್ ಸಕಾರಿಯಾ ಆಸ್ಪತ್ರೆ ಬಿಲ್ ಪಾವತಿಸಿ, ತಂದೆಯನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಸಕಾರಿಯಾ ತಂದೆ ಕೊರೋನಾಗೆ ಬಲಿಯಾಗಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಚೇತನ್ ಸಕಾರಿಯಾ ಅವರ ಸಹೋದರ ಆತ್ಮಹತ್ಯೆಗೆ ಶರಣಾಗಿದ್ದರು, ಇದೀಗ ತಂದೆ ಕೂಡ ಕೊರೊನಾಗೆ ಬಲಿಯಾಗಿದ್ದಾರೆ. ಸಕಾರಿಯಾ ತನ್ನ ಸಹೋದರ ಸಾಯುವ ಸಮಯದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿದ್ದರು. ಅಲ್ಲದೆ ಪಂದ್ಯಾವಳಿ ಮುಗಿಯುವವರೆಗೆ ಅವರಿಗೆ ಈ ದುಃಖದ ಸಂಗತಿಯ ಅರಿವಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top