fbpx
ಸಮಾಚಾರ

ಚಾಮರಾಜನಗರ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ನಟ ಸುದೀಪ್ ಸಹಾಯ ಹಸ್ತ

ಚಾಮರಾಜನಗರದ ಕೋವಿಡ್‌ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿದ್ದವರು ಸೇರಿದಂತೆ 24 ರೋಗಿಗಳು ಮೃತಪಟ್ಟ ಪ್ರಕರಣವು ಕೋವಿಡ್‌ ದುರಿತ ಕಾಲದಲ್ಲಿ ರಾಜ್ಯ ಕಂಡ ಮಹಾದುರಂತ. ಕಳೆದ ಭಾನುವಾರದ ಸಂಜೆವರೆಗೂ ಭರವಸೆಯಲ್ಲಿಯೇ ಬದುಕಿದ್ದವರು, ಕತ್ತಲಾಗುತ್ತಿದ್ದಂತೆಯೇ ಕಣ್ಮುಚ್ಚಿದ ಸುದ್ದಿ ಇಡೀ ರಾಜ್ಯದ ಜನರ ನೋವಿಗೆ ಕಾರಣವಾಗಿತ್ತು. ಈಗ ಈ ದುರಂತದಲ್ಲಿ ಮೃತಪಟ್ಟವರ ಕುಟುಂಬದ ನೆರವಿಗೆ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ.

 

 

ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕಿಚ್ಚ ಸುದೀಪ್ ಸಾಂತ್ವನ ನೀಡಿದ್ದಾರೆ. 24 ಕುಟುಂಬಗಳಿಗೆ ಅಗತ್ಯ ನೆರವು, ಕೆಲ ಮಕ್ಕಳ ಶಿಕ್ಷಣ, ಚಿಕಿತ್ಸೆಯ ಜವಾಬ್ದಾರಿ ತೆಗೆದುಕೊಂಡಿದೆ ಕಿಚ್ಚ ಚಾರಿಟೇಬಲ್ ಟ್ರಸ್ಟ್. ಕುಟುಂಬಗಳಿಗೆ ದಿನಸಿ ನೆರವು ನೀಡಿದೆ. ಕಿಚ್ಚ ಚಾರಿಟೇಬಲ್ ಟ್ರಸ್ಟ್‌ನ ಸಹಾಯ ನೆನೆದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.

ಅಷ್ಟೇ ಅಲ್ಲದೆ ಆಕ್ಸಿಜನ್ ಕೊರತೆಯಿಂದ ಪ್ರಾಣ ಕಳೆದುಕೊಂಡ ಎಲ್ಲಾ 24 ಮೃತರ ಮನೆಗಳಿಗೆ ಭೇಟಿ ನೀಡಿದ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಸದಸ್ಯರು, ಸುದೀಪ್ ಪರವಾಗಿ ಸಾಂತ್ವನ ತಿಳಿಸಿದ್ದಾರೆ. ಮೃತ ಕುಟುಂಬಗಳಿಗೆ ಎಲ್ಲಾ ರೀತಿಯಲ್ಲೂ ಸಹಾಯ ಮಾಡುವುದಾಗಿ, ಕುಟುಂಬದ ಜೊತೆ ಸದಾ ಇರುವುದಾಗಿ ಸುದೀಪ್ ಭರವಸೆ ನೀಡಿದ್ದಾರೆ. ಮೃತ ಕುಟುಂಬಕ್ಕೆ ಆರ್ಥಿಕವಾಗಿ, ಕುಟುಂಬದ ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ನೆರವು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top