fbpx
ಸಮಾಚಾರ

ನಟಿ ಸಂಜನಾಗೆ ಮತ್ತೆ ಸಂಕಷ್ಟ: ಮತ್ತೊಂದು ಎಫ್ಐಆರ್ ದಾಖಲು

ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ನಟಿ ಸಂಜನಾ ಗಲ್ರಾನಿ ಜೈಲು ಸೇರಿದ್ದರು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಅವರು ಜೈಲಿನಿಂದ ಹೊರ ಬಂದಿದ್ದರು. ಕೊವಿಡ್​ ಸಂದರ್ಭದಲ್ಲಿ ಅವರು ಸಾಮಾನ್ಯರ ಸಹಾಯಕ್ಕೆ ನಿಂತಿದ್ದಾರೆ. ಈ ಮಧ್ಯೆ, ಸಂಜನಾ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಇದರಿಂದ ಅವರು ಮತ್ತೆ ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ.

2 ವರ್ಷಗಳ ಹಿಂದೆ ಮಾಡೆಲ್​​ ವಂದನಾ ಜೈನ್ ಎಂಬುವರೊಂದಿಗೆ ಸಂಜನಾ ಗಲಾಟೆ ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಕ್ಲಬ್​​ವೊಂದರಲ್ಲಿ ಪರಸ್ಪರ ಅವಾಚ್ಯ ಶಬ್ಧಗಳಿಂದ ಬೈದಾಡಿಕೊಂಡು, ಹೊಡೆದಾಡಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಸಂಜನಾ ಹಾಗೂ ವಂದನಾ ಜೈನ್ ಇಬ್ಬರೂ ಒಬ್ಬರ ಮೇಲೊಬ್ಬರು ದೂರು ದಾಖಲಿಸಿದ್ದರು. ಈ ಪ್ರಕರಣದ ಬಗ್ಗೆ ವಂದನಾ ಕೋರ್ಟ್​ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್​ ನಿರ್ದೇಶನದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ?
2019 ರಲ್ಲಿ ಲ್ಯಾವೆಲ್ಲಿ ರಸ್ತೆಯ ಕ್ಲಬ್‍ನಲ್ಲಿ ವಂದನಾ ಜೈನ್ ಸ್ನೇಹಿತನೊಂದಿಗೆ ಮಾತುಕತೆ ವೇಳೆ ಸಂಜನಾ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆ. ಈ ವೇಳೆ ಅವಾಚ್ಯ ಶಬ್ಧಗಳನ್ನು ಬಳಸದಂತೆ ವಂದನಾ ಜೈನ್ ಸೂಚನೆ ನೀಡಿದ್ದಾರೆ. ಬಳಿಕ ವಂದನಾ ಮುಖಕ್ಕೆ ಮಧ್ಯ ಎರಚಿ ಸಂಜನಾ ಹಲ್ಲೆ ಮಾಡಿದ್ದಾರೆ. ಇದರಿಂದ ವಂದನಾ ಜೈನ್ ಕಣ್ಣಿಗೆ ಗಾಯವಾಗಿದೆ. ಘಟನೆ ಬಳಿಕ ಸಂಜನಾ ವಂದನಾಗೆ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top