fbpx
ಸಮಾಚಾರ

ಕೊನೆಗೂ ತಮ್ಮ ಡೈವೋರ್ಸ್ ಬಗ್ಗೆ ಮೌನ ಮುರಿದ ನಿಧಿ: ಫೇಸ್ಬುಕ್ ಲೈವ್ ನಲ್ಲಿ ನಿಧಿ ಸುಬ್ಬಯ್ಯ ಮಾತು!

ಬಿಗ್ ಬಾಸ್ ಕನ್ನಡ ಸೀಸನ್ 8 ರಿಯಾಲಿಟಿ ಶೋ ಅರ್ಧಕ್ಕೆ ನಿಂತುಹೋಗಿದೆ. ಮನೆಯೊಳಗೆ 72 ದಿನಗಳ
ಕಾಲ ಖುಷಿಯಾಗಿದ್ದ ಸ್ಪರ್ಧಿಗಳು ಆಚೆಗೆ ಬಂದಿದ್ದಾರೆ. ಸದ್ಯ ಮೈಸೂರಿನಲ್ಲಿರುವ ನಿಧಿ ಸುಬ್ಬಯ್ಯ ಇದೀಗ ಮೊದಲ ಬಾರಿಗೆ ಫೇಸ್‌ಬುಕ್ ಲೈವ್‌ನಲ್ಲಿ ಬಿಗ್ ಬಾಸ್ ಜರ್ನಿ ಕುರಿತು ಮಾತನಾಡಿದ್ದಾರೆ. ಈ ವೇಳೆ ತಮ್ಮ ವೈವಾಹಿಕ ಜೀವನದ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಹೌದು. ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ತಮ್ಮ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದರು. ನಿಧಿ ಕೂಡ ತಮ್ಮ ತಂದೆಗೆ ಕ್ಯಾನ್ಸರ್ ಆಗಿತ್ತು ಎಂಬಿತ್ಯಾದಿ ವಿಷಯಗಳನ್ನು ಹಂಚಿಕೊಂಡಿದ್ದರು. ಆದರೆ ಅವರು ತನಗೆ ಮದುವೆ ಆಗಿದೆ ಎನ್ನುವ ವಿಚಾರವನ್ನು ಎಲ್ಲಿಯೂ ಬಹಿರಂಗಪಡಿಸಿರಲಿಲ್ಲ. ಇದು ಏಕೆ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. ಆದರೆ ಇದೀಗ ಈ ಕುರಿತು ಗುಟ್ಟು ಬಿಟ್ಟುಕೊಡುವ ಮೂಲಕ ಮದುವೆ ವಿಚಾರಕ್ಕೆ ನಿಧಿ ಫುಲ್ ಸ್ಟಾಪ್ ಹಾಕಿದ್ದಾರೆ.

 

 

“ನನ್ನ ಜೀವನದಲ್ಲಿ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತು. ನಾನು ಮದುವೆ ಆಗಿದ್ದೆ. 10 ತಿಂಗಳ ನಂತರ ಅದು ಮುಂದುವರಿಯಲಿಲ್ಲ. ಅಮ್ಮನ ಬಳಿಯೂ ಈ ಬಗ್ಗೆ ನಾನು ಚರ್ಚೆ ಮಾಡಲ್ಲ. ಅದನ್ನು ಅಲ್ಲಿಗೆ ಬಿಟ್ಟು ಜೀವನದ ಜೊತೆ ಮುಂದೆ ಸಾಗೋಣ ಅನ್ನೋದು ನನ್ನ ಪಾಲಿಸಿ. ಅದಕ್ಕೆ ನಾನು ಅದರ ಬಗ್ಗೆ ಅಲ್ಲಿ ಮಾತನಾಡಲಿಲ್ಲ.” ಎಂದು ನಿಧಿ ಸುಬ್ಬಯ್ಯ ಹೇಳಿದ್ದಾರೆ.

ನಿಜ ಜೀವನದಲ್ಲಿ ಏನಾದರೂ ಕೆಟ್ಟದ್ದು ಆದಾಗ ಅದರ ಬಗ್ಗೆ ಮಾತಾಡುವುದು. ಈ ಮೂಲಕ ಸಿಂಪತಿ ಪಡೆಯಬೇಕು ಅನ್ನೋ ವ್ಯಕ್ತಿ ನಾನಲ್ಲ. ಎಲ್ಲರ ಜೀವನದಲ್ಲೂ ಏರುಪೇರು ಇದ್ದೇ ಇರುತ್ತದೆ. ಒಳ್ಳೆಯ ಸಂಗತಿಗಳನ್ನು ಜನ ತುಂಬಾ ಕಡಿಮೆ ಮಾತಾಡ್ತಾರೆ, ಬೇಸರದ ಬಗ್ಗೆ ತುಂಬ ಮಾತಾಡ್ತಾರೆ. ಆದರೆ ನಾನು ಸ್ವಲ್ಪ ವಿಭಿನ್ನ ಅಂತ ನಿಧಿ ಹೇಳಿದ್ದಾರೆ.

ಅಂದಹಾಗೆ ಫೆಬ್ರವರಿ 11,2017ರಲ್ಲಿ ವಿರಾಜಪೇಟೆ ಖಾಸಗಿ ರೆಸಾರ್ಟ್‌ವೊಂದರಲ್ಲಿ ಗೆಳೆಯ ಲವೇಶ್‌ ಜೊತೆ ನಿಧಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮುಂಬೈ ಮೂಲದ ಲವೇಶ್‌ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದವರು. ಕೆಲವು ಮೂಲಗಳ ಮಾಹಿತಿ ಪ್ರಕಾರ ನಿಧಿ ಮದುವೆ ಆದ ನಂತರ ವಿದೇಶದಲ್ಲಿ ನೆಲೆಸಿದ್ದರು, ಎನ್ನಲಾಗಿದೆ. ಈ ಅವಧಿಯಲ್ಲಿ ನಿಧಿ ಸೋಷಿಯಲ್ ಮೀಡಿಯಾದಿಂದಲೂ ದೂರವಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top