fbpx
ಸಮಾಚಾರ

ಬಿಗ್ ಬಾಸ್ ಕನ್ನಡ-8 ಪುನರಾರಂಭದ ಸುಳಿವು ನೀಡಿದ ಕಿಚ್ಚ ಸುದೀಪ್

ಬಿಗ್ ಬಾಸ್ ರಿಯಾಲಿಟಿ ಶೋ 72ನೇ ದಿನಕ್ಕೆ ಕೊನೆಗೊಂಡಿದೆ. ಕೋವಿಡ್ ಆರ್ಭಟದಲ್ಲಿ ಶೂಟಿಂಗ್ ಸಾಧ್ಯವಾಗದೇ ಮುಕ್ಕಾಲು ಭಾಗ ಮುಗಿದಿದ್ದ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಗಿದೆ. ಆದರೆ, ಇದು ಇಷ್ಟಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮತ್ತೆ ಆರಂಭವಾಗುವ ಸೂಚನೆ ಕೊಟ್ಟಿದ್ದಾರೆ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್.

ಬಿಗ್ ಕೊನೆಯ ಎಪಿಸೋಡ್‍ನಲ್ಲಿ ಬಟೆಗಳನ್ನು ಪ್ಯಾಕ್ ಮಾಡಿಕೊಂಡು ತಮ್ಮ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆಲ್ಲ ವೀಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ. ಆ ವಿಡಿಯೋ ಮೆಸೇಜ್‌ನಲ್ಲಿ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮಕ್ಕೆ ತಾರ್ತಿಕ ಅಂತ್ಯ ಸಿಗುವುದರ ಬಗ್ಗೆ ಕಿಚ್ಚ ಸುದೀಪ್ ಸುಳಿವು ನೀಡಿದ್ದಾರೆ. ”ವಿನ್ನರ್ ಯಾರು ಅಂತ ತೀರ್ಮಾನ ಆಗದೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಒಂದು ಕ್ಲೋಶರ್ ಸಿಗುವುದಿಲ್ಲ. ಹೀಗಾಗಿ ಮುಂದೆ ಏನಾದರೂ ಒಂದು ಆಗುತ್ತದೆ” ಎಂಬ ಭರವಸೆಯನ್ನು ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ನೀಡಿದ್ದಾರೆ. ಸುದೀಪ್ ಅವರ ಈ ಮಾತನ್ನು ಕೇಳಿ ಸ್ಪರ್ಧಿಗಳು ನಿರಾಳರಾಗಿದ್ದಾರೆ, ಸಮಾಧಾನಗೊಂಡಿದ್ದಾರೆ.

“ನಿಮಗಾಗಲೇ ವಿಷಯ ತಲುಪಿದೆ, ಸದ್ಯಕ್ಕೆ ಶೋ ಸ್ಟಾಪ್ ಆಗುತ್ತಿದೆ. ನೀವೆಲ್ಲರೂ ನಿಮ್ಮ ಮನೆಗಳಿಗೆ ವಾಪಸ್ ಹೋಗುತ್ತಿದ್ದೀರಿ, ಇದು ತುಂಬಾ ಕಷ್ಟದ ವಿಚಾರ ಎಂಬುದು ತಿಳಿದಿದೆ. ಇಷ್ಟು ವಾರಗಳ ಬಳಿಕ, ಇಷ್ಟೊಂದು ಶ್ರಮ, ಭರವಸೆ, ನಂಬಿಕೆ ಇದೆಲ್ಲದ ಮಧ್ಯೆ ಈ ರೀತಿ ಒಂದು ವಿಚಾರ ನಿಮ್ಮ ಕಿವಿಗೆ ಬಿದ್ದಾಗ ಹೇಗೆ ಸ್ವೀಕರಿಸಿದ್ದೀರಿ ಎಂಬುದು ಗೊತ್ತಿಲ್ಲ. ಆದರೆ ಹೊರಗಡೆಯ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ತಂಡ ತೆಗೆದುಕೊಳ್ಳಬೇಕಿದೆ. ಆದರೆ ಇದೇ ಅಂತ್ಯ ಅಲ್ಲ” ಎಂದು ಹೇಳಿದ್ದಾರೆ.

ಹೀಗಾಗಿ, ಕೊರೊನಾ ಅಬ್ಬರ ಇಳಿದ ಬಳಿಕ ಕೊನೆಯ ಕಂತುಗಳನ್ನು ಮತ್ತೆ ನಡೆಸುವ ಸಾಧ್ಯತೆ ಇದ್ದಂತೆ ಕಾಣುತ್ತಿದೆ. ಭವಿಷ್ಯ ಕೊರೊನಾ ಪರಿಸ್ಥಿತಿ ಏನಾಗಬಹುದು ಎಂಬ ಊಹೆ ಮಾಡಲಾಗದ ಕಾರಣ ಶೋ ಪುನರಾರಂಭಿಸುವ ಯೋಚನೆ ಬಗ್ಗೆ ಬಿಗ್ ಬಾಸ್ ತಂಡ ಅಧಿಕೃತ ಮಾಹಿತಿ ನೀಡಿದಂತಿಲ್ಲ ಎನ್ನುವಂತೆ ಕಾಣುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top