fbpx
ಸಮಾಚಾರ

ನಟ ಸಂಚಾರಿ ವಿಜಯ್ ಅಗಲಿ 3 ದಿನ – ಸಮಾಧಿಗೆ ಹಾಲು-ತುಪ್ಪ ಬಿಟ್ಟ ಕುಟುಂಬಸ್ಥರು

ಅಪಘಾತಕ್ಕೀಡಾಗಿ ಮೂರು ದಿನಗಳ ಹಿಂದೆ ಸಾವನ್ನಪ್ಪಿದ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಮಾಧಿಗೆ ಇಂದು ಅವರ ಕುಟುಂಬಸ್ಥರು ಹಾಗೂ ಸ್ನೇಹಿತರು ಮರಣದ ನಂತರದ ಕ್ರಿಯಾವಿಧಿಗಳನ್ನ ನೆರವೇರಿಸಿದ್ದಾರೆ.

ವಿಜಯ್​ ಅಂತ್ಯಸಂಸ್ಕಾರ ಮಾಡಿ ಮೂರು ದಿನ ಕಳೆದಿದೆ. ಹೀಗಾಗಿ, ಪಂಚನಹಳ್ಳಿ ಬಳಿಯ ತೋಟದಲ್ಲಿರುವ ಸಮಾಧಿಗೆ ತೆರಳಿದ ವಿಜಯ್ ಸಹೋದರರು, ಕುಟುಂಬಸ್ಥರು, ಸ್ನೇಹಿತ ರಘು ಭಾಗಿಯಾಗಿ ಹಾಲು-ತುಪ್ಪ ಬಿಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಇಡೀ ಕುಟುಂಬ ಹಾಗೂ ಊರಿನವರಲ್ಲಿ ದುಃಖ ಮಡುಗಟ್ಟಿದೆ. ಹಿಂದೂ ಸಂಪ್ರದಾಯದ ವೀರಶೈವ ಪದ್ಧತಿಯಂತೆ ಅವರ ಸಮಾಧಿಗೆ ಹಾಲು-ತುಪ್ಪ ಬಿಟ್ಟಿದ್ದಾರೆ. ವಿಜಯ್ ಸಹೋದರರು, ಕುಟುಂಬಸ್ಥರು, ವಿಜಯ್ ಆಪ್ತಮಿತ್ರ ರಘು ಹಾಗೂ ಸ್ನೇಹಿತರೊಡಗೂಡಿ ಸಮಾಧಿ ಸ್ಥಳಕ್ಕೆ ತೆರಳಿ, ಪೂಜೆ ಸಲ್ಲಿಸಿ ಹಾಲು-ತುಪ್ಪ ಎರೆದಿದ್ದಾರೆ.

ಜೂನ್ 13ರಂದು ಬೈಕ್ ಅಪಘಾತದಿಂದ ಮೆದುಳು ನಿಷ್ಕ್ರಿಯಗೊಂಡು ಮೂರು ದಿನಗಳ ಕಾಲ ಸಾವು-ಬದುಕಿನ ಮಧ್ಯೆ ಹೋರಾಡಿದ್ದ ಸಂಚಾರಿ ವಿಜಯ್, ಜೂನ್ 15ರಂದು ಉಸಿರು ಚೆಲ್ಲಿದರು. ನಂತರ ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ಪಂಚನಹಳ್ಳಿಯಲ್ಲಿ ಅವರ ಸ್ನೇಹಿತನ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆದಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top