fbpx
ಸಮಾಚಾರ

ಜೂನ್ 18: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜೂನ್ 18, 2021 ಶುಕ್ರವಾರ
ವರ್ಷ : 1943 ಪ್ಲಾವ
ತಿಂಗಳು : ಜ್ಯೇಷ್ಠ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಅಷ್ಟಮೀ 8:38 pm
ನಕ್ಷತ್ರ : ಉತ್ತರ 9:37 pm
ಯೋಗ : ವ್ಯತಿಪಾತ 2:47 am
ಕರಣ : ವಿಷ್ಟಿ 9:23 am ಬಾವ 8:38 pm

Time to be Avoided
ರಾಹುಕಾಲ : 10:45 am – 12:20 pm
ಯಮಗಂಡ : 3:32 pm – 5:08 pm
ದುರ್ಮುಹುರ್ತ : 8:31 am – 9:22 am, 12:46 pm – 1:37 pm
ವಿಷ : 5:37 am – 7:08 am
ಗುಳಿಕ : 7:33 am – 9:09 am

Good Time to be Used
ಅಮೃತಕಾಲ : 2:36 pm – 4:09 pm
ಅಭಿಜಿತ್ : 11:55 am – 12:46 pm

Other Data
ಸೂರ್ಯೋದಯ : 5:54 am
ಸುರ್ಯಾಸ್ತಮಯ : 6:47 pm
ರವಿರಾಶಿ : ಮಿಥುನ
ಚಂದ್ರರಾಶಿ : ಕನ್ಯ

 

 

 

ಮಹತ್ವದ ಸ್ಥಾನಮಾನಕ್ಕಾಗಿ ಬಹಳಷ್ಟು ಮುತುವರ್ಜಿಯಿಂದ ಪ್ರಯತ್ನ ಮಾಡಿ. ನಿಮ್ಮ ಮನೋಕಾಮನೆಗಳು ಯಶಸ್ಸಿನತ್ತ ಸಾಗುವವು. ಪರಿಶ್ರಮದಿಂದ ಧನಸಂಪಾದನೆಗೆ ಮುಂದಾಗಿ. ವಿದ್ಯಾರ್ಥಿಗಳು ಸಾಕಷ್ಟು ಓದಿನ ಕಡೆ ಗಮನ ಹರಿಸಬೇಕು.

 

ನಿಮ್ಮ ಆತ್ಮವಿಶ್ವಾಸವನ್ನು ತುಂಡರಿಸುವ ಧೂರ್ತರು ಎದುರಾಗುವರು. ಅದಕ್ಕೆ ನೀವು ಅಳುಕದೆ ನೀವು ಅಂದುಕೊಂಡಿರುವ ಕಾರ್ಯ ಕ್ಷೇತ್ರವನ್ನು ನಿರ್ಭಯದಿಂದ ಮಾಡಿ. ನಿಮ್ಮ ಕಾರ್ಯಕ್ಕೆ ಭಗವಂತ ಸಹಕಾರ ನೀಡುವನು.

 

ತುಸು ಬಳಲಿಕೆಯು ನಿಮ್ಮನ್ನು ಕಾಡುವುದು. ಇದು ನೀವು ಮಾಡುವ ಕೆಲಸಗಳ ಮೇಲೆ ಪರಿಣಾಮ ಬೀರುವುದು. ಆದರೆ ತುಸು ಧೈರ್ಯದಿಂದ ಕಾರ್ಯ ಮುಗಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರತಿಫಲ ಕಾಣುವಿರಿ.

 

ನಿಮ್ಮದೇ ಆದ ಸ್ವಂತವಾದ ಆಸ್ತಿ ಹಾಗೂ ಮನೆಯ ವಿಚಾರಕ್ಕೆ ಕಾಲದ ನೆರವು ಬೇಗನೆ ಲಭ್ಯವಾಗುವುದು. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಕಂಡುಬರುವುದು. ಹಣಕಾಸಿನ ಸ್ಥಿತಿ ಸಾಧಾರಣವಾಗಿರುವುದು.

 

 

ದೈವದ ಬಲ ಹೆಚ್ಚಾಗಿರುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಸುಲಲಿತವಾಗುವವು. ನಿಮ್ಮ ಸಹೋದ್ಯೋಗಿಗಳು ನಿಮ್ಮ ಜಾಣ್ಮೆಯನ್ನು ಕೊಂಡಾಡುವರು. ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ.

 

 

ಮಾನಸಿಕ ದೃಢತೆಯನ್ನು ಸಂಪಾದಿಸಿಕೊಳ್ಳಿ. ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ಅನುಗ್ರಹದಿಂದ ಸುಲಲಿತವಾಗುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಮನೆ ಮಂದಿಯ ಪ್ರೀತಿ ಸೌಹಾರ್ದತೆ ನಿಮ್ಮನ್ನು ಬೆರಗುಗೊಳಿಸುತ್ತವೆ.

 

 

ಕೆಲವು ವಿಚಾರಗಳ ಬಗ್ಗೆ ನೀವು ಹೆಚ್ಚು ಭಾವುಕರಾಗುವಿರಿ. ಆದರೆ ತೀರ ಭಾವುಕತೆಯಿಂದ ವ್ಯವಹರಿಸುವಾಗ ವೈಫಲ್ಯ ಸಂಭವಿಸುವ ಸಾಧ್ಯತೆ ಇದೆ. ಕೆಲವು ವಿಚಾರಗಳಲ್ಲಿ ದೃಢ ನಿರ್ಧಾರ ತಳೆಯುವುದು ಹಿಂದೆಗಿಂತಲೂ ಇಂದು ಹೆಚ್ಚು ಅವಶ್ಯಕವಾಗಿದೆ.

 

 

ಕುಟುಂಬದ ಬಗೆಗಿನ ಜವಾಬ್ದಾರಿಗಳನ್ನು ನಿರ್ವಹಿಸಲು ಮರೆಯದಿರಿ, ತಪ್ಪು ಮಾಹಿತಿ ನೀಡುವವರ ಬಗ್ಗೆ ಎಚ್ಚರವಿರಲಿ. ನಿಮ್ಮ ಗುರಿಯು ಬಾಣದಂತೆ ನೇರವಾಗಿರಲಿ. ಬಾಳಸಂಗಾತಿ ಅಥವಾ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಸೂಕ್ತ ಗಮನ ನೀಡಿ.

 

 

ನಿಮ್ಮ ದೌರ್ಬಲ್ಯಗಳು ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಅನ್ಯರನ್ನು ಟೀಕೆ ಮಾಡುವ ಮೊದಲು ನೀವು ಎಷ್ಟರಮಟ್ಟಿಗೆ ಸರಿ ಇದ್ದೀರಾ ಎಂದು ಯೋಚಿಸಿ ಮಾತನಾಡಿ. ಇದರಿಂದ ನಿಮ್ಮ ಗೌರವ ಘನತೆ ಹೆಚ್ಚುವುದು.

 

 

ಮನಸ್ಸಿನ ಒತ್ತಡವನ್ನು ಒಬ್ಬರೇ ಮನಸ್ಸಿನಲ್ಲಿಟ್ಟುಕೊಂಡು ಕೊರಗದಿರಿ. ನಿಮ್ಮ ಆತ್ಮೀಯ ಸ್ನೇಹಿತರ ಸಂಗಡ ವಿಚಾರಗಳನ್ನು ಹಂಚಿಕೊಳ್ಳಿ. ನೀವು ಎದುರಿಸುತ್ತಿರುವ ಸಮಸ್ಯೆಗೆ ಸೂಕ್ತ ಉತ್ತರ ದೊರೆಯುವುದು.

 

ಸಾಲ ಬಾಧೆಯ ತೀವ್ರತೆ ಕಡಿಮೆ ಆಗುವುದು, ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಉತ್ತಮ ದಿನ. ಸಂಬಂಧಿಗಳ ಬಳಿ ಹಳೆಯ ವಿಚಾರಗಳನ್ನು ಕೆದಕಲು ಪ್ರಯತ್ನಿಸದಿರಿ. ಕೆದಕಲು ಹೋದರೆ ಮುಂದಿನ ಉತ್ತಮ ಬಾಂಧವ್ಯ ಮುರಿದು ಬೀಳುವುದು. ಹಳೇ ಭಿನ್ನಾಭಿಪ್ರಾಯ ಉತ್ತಮ ಮಾತುಕತೆಯ ಸಂವಹನದಿಂದ ಕೊನೆಗೊಳ್ಳಲಿದೆ. ಜೀವನದಲ್ಲಿ ಹರ್ಷದ ವಾತಾವರಣ ಉಂಟಾಗುವುದು.

 

ರಾಜಕೀಯ ಸಂಬಂಧವಾಗಿ ನಿಮಗೆ ಹೊಸ ಜವಾಬ್ದಾರಿ ಹೊರುವ ಅವಕಾಶ ದೊರೆಯುವುದು. ಬಂದ ಸುಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಹಣದ ಅಡಚಣೆ ಎಂದು ಅಧಿಕಾರ ತಿರಸ್ಕರಿಸದಿರಿ, ವ್ಯಾಪಾರದ ವಿಷಯದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಆದರೆ ನೀವು ಧೈರ್ಯದಿಂದ ಮುಂದೆ ಹೆಜ್ಜೆಯನ್ನು ಇಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top