fbpx
ಸಮಾಚಾರ

ಕನ್ನಡದ ಹಿರಿಯ ನಟಿ ಕವಿತಾ ಮಗ ಕೊರೋನಾಕ್ಕೆ ಬಲಿ

ಕೊರೋನಾ ಎರಡನೇ ಅಲೆಯ ಉಪಟಳ ಮುಂದುವರೆದಿದ್ದು ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದೀಗ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ಹಿರಿಯ ನಟಿ ಕವಿತಾ ಅವರ ಮಗ ಕೊವಿಡ್​ನಿಂದ ಮೃತಪಟ್ಟಿದ್ದಾರೆ.

ಕವಿತಾ ಅವರ ಮಗ ಸಂಜಯ್​ ರೂಪ್​ಗೆ ಕೊವಿಡ್​ ಕಾಣಿಸಿಕೊಂಡಿತ್ತು. ಸಣ್ಣ ಪ್ರಮಾಣದಲ್ಲಿ ಜ್ವರ ಇರುವುದರಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಏರುಪೇರಾಗಿ ಕಂಡುಬಂದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ, ಆಗಲೇ ಅವರ ದೇಹದಲ್ಲಿ ಕೊರೋನಾ ಸೋಂಕು ಹೆಚ್ಚಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಸಂಜಯ್​ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನು, ಕವಿತಾ ಅವರ ಪತಿಗೂ ಕೊವಿಡ್​ ಕಾಣಿಸಿಕೊಂಡಿತ್ತು. ಹೀಗಾಗಿ, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಲಗಳ ಪ್ರಕಾರ ಅವರ ಆರೋಗ್ಯ ಸ್ಥಿತಿ ಕೂಡ ಚಿಂತಾಜನಕವಾಗಿದೆ ಎನ್ನಲಾಗಿದೆ. ಈ ಕಾರಣಕ್ಕೆ ಅವರಿಗೆ ಚಿಕಿತ್ಸೆ ನೀಡುವುದನ್ನು ಮುಂದುವರಿಸಲಾಗಿದೆ.

ಕನ್ನಡದಲ್ಲಿ ಕಿಲಾಡಿ ಕಿಟ್ಟು, ಪುಟ್ನಂಜ, ಸೂಪರ್ ಸ್ಟಾರ್, ಎಚ್​2ಓ, ಭೂತಯ್ಯನ ಮಕ್ಕಳು, ಚಂದ್ರ ಚಕೋರಿ ಸೇರಿದಂತೆ ೨೯ ಸಿನಿಮಾಗಳಲ್ಲಿ ಕವಿತಾ ನಟಿಸಿದ್ದಾರೆ. 2009ರಲ್ಲಿ ತೆರೆಗೆ ‘ ಉಲ್ಲಾಸ ಉತ್ಸಾಹ’ ಚಿತ್ರ ಕವಿತಾ ನಟಿಸಿದ ಕೊನೆಯ ಸಿನಿಮಾ. ಸಿನಿಮಾ ಮಾತ್ರವಲ್ಲ ಕಿರುತೆರೆಯ ಕೆಲ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top