fbpx
ಸಮಾಚಾರ

“ದೇವರು ನಿಜವಾಗ್ಲೂ ಕ್ರೂರಿ” ಮೇಘನಾ ರಾಜ್ ಭಾವುಕ ಪೋಸ್ಟ್

ನಟ ಸಂಚಾರಿ ವಿಜಯ್ ಅಭಿಮಾನಿಗಳನ್ನು ಅಗಲಿದ್ದಾರೆ. ಇನ್ನಡ ಚಿತ್ರರಂಗ ಸಂಚಾರಿ ವಿಜಯ್ ಅವರಿಗೆ ಅಂತಿಮ ನಮನ ಸಲ್ಲಿಸಿದೆ. ಸೋಶಿಯಲ್ ಮೀಡಿಯಾ ಮುಖೇನ ಅವರೊಂದಿಗೆ ಕೆಲಸ ಮಾಡಿದ ಅನೇಕರು ನೆನಪು ಹಂಚಿಕೊಂಡಿದ್ದಾರೆ. ಅದೇ ರೀತಿ ನಟಿ ಮೇಘನಾ ರಾಜ್ ಕೂಡ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

 

 

ಕಳೆದ ವರ್ಷ ಚಿರು ತೀರಿಕೊಂಡ ಹಲವು ದಿನಗಳ ಬಳಿಕ ಮೇಘನಾ ರಾಜ್ ಅವರು ಚಿರು ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು. ಇದಕ್ಕೆ ಅಂದು ಪ್ರತಿಕ್ರಿಯಿಸಿದ್ದ ವಿಜಯ್, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ, ದೇವರು ಕೂಡ ನಮ್ಮ ಜೊತೆ ಇದ್ದಾರೆ ಎಂದು ಹೇಳುವ ಮೂಲಕ ಮೇಘನಾ ಬೆನ್ನಿಗೆ ನಿಂತಿದ್ದರು. ಆದರೆ ಇಂದು ವಿಜಯ್ ಕೂಡ ನಮ್ಮನ್ನು ಅಗಲಿದ್ದಾರೆ. ಹೀಗಾಗಿ ವಿಜಯ್ ಅವರ ಈ ಮಾತನ್ನು ಇಂದು ಮೇಘನಾ ನೆನಪಿಸಿಕೊಂಡಿದ್ದಾರೆ.

ಸಂಚಾರಿ ಬರೆದ ಪೋಸ್ಟ್‌ ಅನ್ನು ಮೇಘನಾ ಶೇರ್ ಮಾಡಿಕೊಂಡು, ಬಹಳ ದುಃಖದಿಂದ ದೇವರು ನಿಜಕ್ಕೂ ಕ್ರೂರಿ ಎಂದಿದ್ದಾರೆ. ನಮ್ಮ ಜೊತೆ ದೇವರಿದ್ದಾನೆ, ಎಂದು ಹೇಳಿದ ವ್ಯಕ್ತಿ ದೇವರ ಮಡಿಲಿಗೆ ಸೇರಿದ್ದಾರೆ. ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top