fbpx
ಸಮಾಚಾರ

ಭರ್ಜರಿ ನೇಮಕಾತಿ: 25 ,271 ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಿಸಿದೆ. ಕಾನ್ಸ್ ಟೇಬಲ್ (GD) ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಆಗಸ್ಟ್ 31ರೊಳಗೆ ಸಲ್ಲಿಸಬಹುದು.

ವಿದ್ಯಾರ್ಹತೆ:
ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಟ್ರಿಕ್ಯುಲೇಷನ್ ಹಾಗೂ 10ನೇ ತರಗತಿ ಪಾಸ್ ವಿದ್ಯಾರ್ಹತೆ.

ವಯೋಮಿತಿ ಅರ್ಹತೆಗಳು
ಕನಿಷ್ಠ ವಯಸ್ಸು: 18 ವರ್ಷ.
ಗರಿಷ್ಠ ವಯೋಮಿತಿ: 23 ವರ್ಷ. (ವಯೋಮಿತಿ ಸಡಿಲಿಕೆ ನಿಯಮಗಳು ವರ್ಗಾವಾರು ಅನ್ವಯವಾಗಲಿವೆ.)

ಅರ್ಜಿ ಶುಲ್ಕ:
SC/ ST/ ಮಾಜಿ ಯೋಧ/ ಮಹಿಳೆಯರಿಗೆ ಯಾವುದೇ ಶುಲ್ಕ ಇಲ್ಲ. ಇತರರಿಗೆ 100ರೂ. ಅರ್ಜಿ ಶುಲ್ಕ ಇದ್ದು, ಎಸ್ ಬಿಐ ಚಲನ್/ನೆಟ್ ಬ್ಯಾಂಕಿಂಗ್/ ವೀಸಾ, ಮಾಸ್ಟರ್ ಕಾರ್ಡ್/ ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 31, 2021

ಹುದ್ದೆಯ ನೇಮಕಾತಿಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top