fbpx
ಸಮಾಚಾರ

ಇಂದ್ರಜಿತ್‌ ಲಂಕೇಶ್ ವಿರುದ್ದವೇ ದೂರು ದಾಖಲು

ಸಮುದಾಯಗಳ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ನಿರ್ಮಾಪಕ ಮತ್ತು ನಿರ್ದೇಶಕ ಇಂದ್ರಜೀತ್ ಲಂಕೇಶ್ ವಿರುದ್ಧ ದೂರು ದಾಖಲಿಸುವಂತೆ ಕರ್ನಾಟಕ ಗೃಹ ಇಲಾಖೆಗೆ ಸಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ‌ ಮನವಿ ಮಾಡಿದ್ದಾರೆ. ಗೃಹ ಇಲಾಖೆಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ನಟ ದರ್ಶನ್ ನಿಂದ ಮೈಸೂರಿನ ಹೋಟೆಲ್‌ನಲ್ಲಿ ಹಲ್ಲೆಗೆ ಒಳಗಗಿದ್ದಾರೆ ಎನ್ನಲಾದ ಯುವಕ ದಲಿತ ಸಮದಾಯಕ್ಕೆ ಸೇರಿದವನು ಎಂದು ನಿರ್ದೇಶಕ ಇಂದ್ರಜಿತ್ ಹೇಳಿಕೆ ನೀಡಿದ್ದರು. ಇಂದ್ರಜಿತ್ ಹೇಳಿಕೆ ನಡುವೆ ಹಲ್ಲೆಗೆ ಒಳಗಾಗಿದ್ದ ಯುವಕ ನಾನು ದಲಿತ ಸಮುದಾಯಕ್ಕೆ ಸೇರಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಇದೇ ವಿಚಾರ ಮುಂದಿಟ್ಟುಕೊಂಡು ಸುಳ್ಳು ಹೇಳಿ ಸಮುದಾಯಗಳ ನಡುವೆ ಶತ್ರುತ್ವಕ್ಕೆ ಕಾರಣವಾದ ಆರೋಪ ಸಂಬಂಧ ಕೇಸು ದಾಖಲಿಸುವಂತೆ ಅಬ್ರಹಾಂ ಒತ್ತಾಯಿಸಿದ್ದಾರೆ.

ಜುಲೈ 15 ರಂದು ಇಂದ್ರಜಿತ್ ಲಂಕೇಶ್, ಮೈಸೂರಿನಲ್ಲಿ ನಡೆದ ಒಂದು ಪಾರ್ಟಿಯಲ್ಲಿ ನಟ ದರ್ಶನ್ ಒಬ್ಬ ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಅದರಿಂದ ಅವರ ಕಣ್ಣು ಬಲವಾಗಿ ಪೆಟ್ಟಾಗಿದೆ ಎಂದು ಆರೋಪಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top