fbpx
ಸಮಾಚಾರ

ಜುಲೈ 21: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 21, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಾದಶೀ 4:25 pm
ನಕ್ಷತ್ರ : ಜ್ಯೇಷ್ಠ 6:30 pm
ಯೋಗ : ಬ್ರಹ್ಮ 4:11 pm
ಕರಣ : ಬಾಲವ 4:25 pm ಕುಲವ 2:59 am

Time to be Avoided
ರಾಹುಕಾಲ : 12:26 pm – 2:00 pm
ಯಮಗಂಡ : 7:41 am – 9:16 am
ದುರ್ಮುಹುರ್ತ : 12:00 pm – 12:51 pm
ವಿಷ : 1:48 am – 3:16 am, 5:02 pm – 6:30 pm
ಗುಳಿಕ : 10:51 am – 12:26 pm

Good Time to be Used
ಅಮೃತಕಾಲ : 10:27 am – 11:54 am

Other Data
ಸೂರ್ಯೋದಯ : 6:02 am
ಸುರ್ಯಾಸ್ತಮಯ : 6:49 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ವೃಶ್ಚಿಕ upto 18:30

 

 

 

ಕಾರ್ಯವಾಸಿ ಕತ್ತೆ ಕಾಲನ್ನು ಹಿಡಿ’ಎಂದರು ಅನುಭಾವಿಗಳು. ಹಾಗಾಗಿ ಈದಿನ ನಿಮ್ಮ ಕೆಲಸಗಳಾಗಬೇಕಾದರೆ ನಿಮ್ಮ ಶತ್ರುಗಳನ್ನು ಗೌರವಿಸಬೇಕಾಗುತ್ತದೆ. ವ್ಯವಹಾರದಲ್ಲಿ ಮುಂದುವರೆಯಲು ಇದು ಅನಿವಾರ್ಯ.

ಪರಿಪೂರ್ಣವಾದ ಯಶಸ್ಸನ್ನು ಹೊಂದಲು ಬಂಧುಗಳು ಹಾಗೂ ಸಹಪಾಠಿಗಳು ಸಹಕರಿಸುವರು. ಗುಣವಂತರ ದರ್ಶನ ಮತ್ತು ಅವರೊಡನೆ ಒಡನಾಟವು ವೃದ್ಧಿಸುವುದು. ಇದರಿಂದ ಸಾಮಾಜಿಕ ಪ್ರತಿಷ್ಟೆ ಹೆಚ್ಚಾಗುವುದು.

 

ನಿಮ್ಮ ಸಹನೆಗೆ ಧಕ್ಕೆ ಬರುವ ಘಟನೆಗಳು ಎದುರಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಆದಷ್ಟು ತಲೆಕೆಡಿಸಿಕೊಳ್ಳದೆ ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಮಕ್ಕಳು ನಿಮಗೆ ಸಂತಸವನ್ನು ನೀಡುವರು.

 

ಕೈಯಲ್ಲಿನ ರೊಟ್ಟಿ ಜಾರಿ ತುಪ್ಪದಲ್ಲಿ ಬಿತ್ತು ಎನ್ನುವಂತೆ ನಿಮ್ಮ ಮನಸ್ಸಿನ ಆಸೆಗಳು ಶೀಘ್ರದಲ್ಲಿಯೇ ನೆರವೇರುವುದು. ಮತ್ತು ಅದರಿಂದ ಸಂತಸ ಎದುರಾಗುವುದು.

 

 

ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ಕೆಲವರು ನಿಮ್ಮಿಂದ ಸಹಕಾರ ಬಯಸುವರು. ನಿಮ್ಮ ಪ್ರೋತ್ಸಾಹಕರ ನುಡಿಗಾಗಿ ನಿಮ್ಮನ್ನು ಸುತ್ತುವರೆಯುವರು. ಹಣಕಾಸಿನ ಚಿಂತೆ ಇರುತ್ತದೆ.

 

 

ಹಿರಿಯರ ಆಶಯ ಪೂರೈಸುವಲ್ಲಿ ವಿಫಲರಾಗುವುದರಿಂದ ನಿಮ್ಮ ವಿಶ್ವಾಸಕ್ಕೆ ಕುತ್ತು ಬರಲಿದೆ. ವ್ಯಾಪಾರ, ವ್ಯವಹಾರಗಳು ಮಂದ ಪ್ರಗತಿಯಲ್ಲಿ ಸಾಗುವುದು. ಮನದ ಮಾತನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದಂತಹ ಪರಿಸ್ಥಿತಿ ಎದುರಾಗುವುದು.

 

 

ನಿನ್ನೆಯ ತಪ್ಪನ್ನು ಇಂದು ಮಾಡದಿರಿ. ಮುಂದೆ ಮಾಡಬೇಕೆಂದಿರುವ ಕೆಲಸಗಳ ಪಟ್ಟಿಯನ್ನು ತಯಾರು ಮಾಡಿಕೊಂಡು ಅದರಂತೆ ಕಾರ್ಯ ನಿರ್ವಹಿಸಿದಲ್ಲಿ ಒಳಿತಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

 

ಋುಣಾತ್ಮಕ ಭಾವನೆಗಳು ನಿಮ್ಮನ್ನು ಕಾಡುವುದು. ಅದರೊಂದಿಗೆ ಈ ವಿಷಯ ಮುಂದಿಟ್ಟುಕೊಂಡು ಪರರಲ್ಲೂ ಋುಣಾತ್ಮಕ ಚಿಂತನೆಯನ್ನು ಹರಡುವಿರಿ. ಕೆಲಸ ಹೆಚ್ಚಾಗುವುದರಿಂದ ಒತ್ತಡದಿಂದ ಇರುವಿರಿ. ಶಿವ ಪಂಚಾಕ್ಷ ರಿ ಮಂತ್ರ ಪಠಿಸಿ.

ನೂತನ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ ದೊರೆಯುವುದು. ಮಾನಸಿಕ ನಿರಾಳತೆ, ಮಿತ್ರರ ಸಹಕಾರ, ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ನೆಮ್ಮದಿಯ ದಿನ.

 

ಹೊಸ ಸಂಬಂಧವು ಏರ್ಪಡಲಿದ್ದು ಅದು ಪ್ರಮುಖ ಪ್ರಾಶಸ್ತ್ಯ ಪಡೆಯಲಿದೆ. ನೆಂಟರೊಂದಿಗೆ ಉತ್ತಮ ಸ್ನೇಹ ಸೌಹಾರ್ದವನ್ನು ಕಾಣುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ. ಬರುವ ಅಪವಾದಗಳಿಂದ ತಪ್ಪಿಸಿಕೊಳ್ಳಿರಿ.

 

ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡಾ ಪೂರ್ಣಗೊಳ್ಳಲಿವೆ. ದೂರಾಲೋಚನೆಯಿಂದ ಹಮ್ಮಿಕೊಂಡ ಕೆಲಸಗಳು ಜನರ ಮೆಚ್ಚುಗೆಗೆ ಪಾತ್ರವಾಗುವುದು.

 

ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಮೊದಲು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಕೌಟುಂಬಿಕವಾಗಿ ಉತ್ತಮ ದಿನ. ಮಕ್ಕಳ ಆಟ-ಪಾಠಗಳು ಮನಸ್ಸಿಗೆ ಮುದ ನೀಡುವುದು. ಆರ್ಥಿಕ ಸ್ಥಿತಿ ಉತ್ತಮ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top