fbpx
ಸಮಾಚಾರ

ವಂಚನೆ ಪ್ರಕರಣಕ್ಕೆ ಟ್ವಿಸ್ಟ್: ನಿರ್ದೇಶಕ ಪ್ರಶಾಂತ್ ರಾಜ್ ಹೇಳಿದ್ದೇನು?

ಖ್ಯಾತ ನಿರ್ದೇಶಕ ಪ್ರಶಾಂತ್ ರಾಜ್ ಅವರ ವಿರುದ್ಧ ಕೇಳಿ ಬಂದಿದ್ದ ವಂಚನೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಯುವ ನಟ ಶಬರೀಶ್ ಅವರು ಪ್ರಶಾಂತ್ ರಾಜ್ ವಿರುದ್ಧ ವಂಚನೆ ಆರೋಪ ಮಾಡಿದ್ದರು. ತನ್ನಿಂದ ಕೆಲಸ ಮಾಡಿಸಿಕೊಂಡು ಹಣಕೊಡದೆ ಕಾರನ್ನು ನೀಡಿ ಈಗ ಕಾರನ್ನು ವಾಪಸ್ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಶಬರೀಶ್, ಪ್ರಶಾಂತ್ ವಿರುದ್ಧ ಆರೋಪಿಸಿದ್ದರು.

ಆದರೆ, ಈ ಆರೋಪವನ್ನು ಪ್ರಶಾಂತ್​ ರಾಜ್ ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಪ್ರಕರಣದ ಬಗ್ಗೆ
ಪ್ರಶಾಂತ್ ರಾಜ್ ಅವರು ಹೇಳುವುದೇ ಬೇರೆ ಬೇರೆ. ಶಬರೀಶ್ ಎನ್ನುವ ವ್ಯಕ್ತಿಯಿಂದ ತನಗೆ ವಂಚನೆ ಆಗಿದೆ ಎಂದಿದ್ದಾರೆ. ಅಲ್ಲದೇ “ಶಬರೀಶ್ ಎನ್ನುವ ವ್ಯಕ್ತಿ ಕೈಗೆ ಸಿಗುತ್ತಿಲ್ಲ, ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ” ಎಂಬ ಆರೋಪವನ್ನು ಮಾಡಿದ್ದಾರೆ.

ಪ್ರಶಾಂತ್ ರಾಜ್ ಹೇಳಿದ್ದೇನು?
“ರಾಮನಗರ ಸಮೀಪದ ನಮ್ಮ ತೋಟದಲ್ಲಿ ಫಾರ್ಮ್ ಹೌಸ್ ನಿರ್ಮಾಣ​ ಕೆಲಸವನ್ನು ಶಬರೀಶ್ ಎಂಬ ವ್ಯಕ್ತಿಗೆ ಕಳೆದ ವರ್ಷ ನೀಡಿದ್ದೆವು. ಆದರೆ, ಆತ ಸರಿಯಾಗಿ ಕೆಲಸ ಮಾಡದೆ ಕಳಪೆ ಕಾಮಗಾರಿ‌ ಮಾಡಿದ್ದರು. 30 ರಿಂದ 40 ಲಕ್ಷ ಹಣ ಮತ್ತು ಓಡಾಡೋಕೆ ಕಾರನ್ನು ಶಬರೀಶ್ ನಮ್ಮ ಬಳಿ ಪಡೆದ್ದರು. ಆದರೆ, ಒಂದು ವರ್ಷದಿಂದ ಕೆಲಸ‌ ಮಾಡಿಲ್ಲ. ಈ ವಿಚಾರವಾಗಿ ಬೆಂಗಳೂರು ಹಾಗೂ ಚೆನ್ನಪಟ್ಟಣದಲ್ಲಿ ಈಗಾಗಲೇ ದೂರು ಕೊಟ್ಡಿದ್ದೇವೆ. ಆದರೆ, ಶಬರೀಶ್​ ಕೆಲಸವನ್ನೂ ಮಾಡದೇ, ಕಾರನ್ನು ನೀಡದೇ ಯಾಮಾರಿಸುತ್ತಿದ್ದಾರೆ. ಇದಕ್ಕೆ ನನ್ನ ಬಳಿ ದಾಖಲೆಗಳಿವೆ’ ಎಂದಿದ್ದಾರೆ ಪ್ರಶಾಂತ್​ ರಾಜ್​.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top