fbpx
ಸಮಾಚಾರ

ತಾಳ್ಮೆ ಕಳೆದುಕೊಂಡು ಪ್ರಶಾಂತ್ ಸಂಬರ್ಗಿ ಮೇಲೆ ಕೈ ಎತ್ತಿದ ವೈಷ್ಣವಿ ಗೌಡ

ನಟಿ ವೈಷ್ಣವಿ ಗೌಡ ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದ್ದಾರೆ. ಅವರ ಮೌನ, ಅವರ ನಗು, ಅವರ ವಿಚಾರಧಾರೆಗಳು ಎಲ್ಲರಿಗೂ ಇಷ್ಟವಾಗಿದೆ. ಆದರೆ, ಇದೇ ಮೊದಲ ಬಾರಿಗೆ ಅವರು ಕೋಪದ ವಿಚಾರದಲ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ವೀಕ್ಷಕರು ಸಾಕಷ್ಟು ಅಚ್ಚರಿ ಹೊರ ಹಾಕಿದ್ದಾರೆ.

ನಟಿ ವೈಷ್ಣವಿ ಗೌಡ ಮೊದಲ ಬಾರಿಗೆ ತಾಳ್ಮೆ ಕಳೆದುಕೊಂಡ ಪ್ರಶಾಂತ್ ಸಂಬರಗಿ ವಿರುದ್ಧ ಏರುದನಿಯಲ್ಲಿ ಮಾತನಾಡಿದ್ದಾರೆ. ಪ್ರಶಾಂತ್‌ಗೆ ಕೋಪದಲ್ಲಿ ಮಾತನಾಡುವುದರ ಜೊತೆಗೆ ಕೈ ಕೂಡ ಎತ್ತಿದ್ದಾರೆ. ‘ಏನಾಗಲೀ ಮುಂದೆ ಸಾಗು ನೀ’ ಆಟದಲ್ಲಿ ಪ್ರಶಾಂತ್ ಸಂಬರಗಿ ಅವರು ವೈಷ್ಣವಿ ಚೀಲ ಎಳೆದಿದ್ದರು ಈ ವೇಳೆ ವೈಷ್ಣವಿ ಗೌಡ ತಾಳ್ಮೆ ಕಳೆದುಕೊಂಡರು

ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಅರ್ಹತೆ ಪಡೆಯಲು ಬಿಗ್ ಬಾಸ್​ ನೀಡಿರುವ ನಾನಾ ನೀನಾ ಟಾಸ್ಕ್​ನಲ್ಲಿ ಅಂಕಗಳಿಸಲು ಬಿಗ್​ ಬಾಸ್​ ನೀಡಿದ ಏನಾಗಲಿ ಮುಂದೆ ಓಡು ನೀ… ಟಾಸ್ಕ್​ನಲ್ಲಿ ಎಲ್ಲ ಸ್ಪರ್ಧಿಗಳು ಬೆನ್ನಿಗೆ ಗೋಣಿ ಚೀಲ ಕಟ್ಟಿಕೊಂಡು ಹಾಕಿರುವ ವೃತ್ತದಲ್ಲಿ ಓಡಬೇಕು. ಓಡುವಾಗ ಹಿಂದೆ ಇರುವ ಸ್ಪರ್ಧಿ ನಿಮ್ಮ ಬೆನ್ನಿಗೆ ಕಟ್ಟಿರುವ ತುಂಬಿರುವ ಚೀಲವನ್ನು ಖಾಲಿ ಮಾಡುತ್ತಾರೆ. ಹೀಗೆ ಯಾರ ಚೀಲ ಮೊದಲು ಖಾಲಿ ಆಗುತ್ತದೆಯೋ ಅವರು ಆಟದಿಂದ ಹೊರ ಹೋಗುತ್ತಾರೆ.

ಹೀಗೆ ಆಟವಾಡುವಾಗ ಪ್ರಶಾಂತ್​ ಸಂಬರಗಿ ಅವರು ವೈಷ್ಣವಿ ಅವರ ಚೀಲದಲ್ಲಿರುವ ವಸ್ತುವನ್ನು ಖಾಲಿ ಮಾಡಲುಯತ್ನಿಸುತ್ತಾರೆ. ಈ ವೇಳೆ ವೈಷ್ಣವಿ ಅವರು ಪ್ರಶಾಂತ್ ಅವರ ಮೇಲೆ ಕೂಗೂತ್ತಾರೆ. ಜೊತೆಗೆ ತಾಳ್ಮೆ ಕಳೆದುಕೊಂಡು ಕೈ ಎತ್ತುತ್ತಾರೆ. ಆದರೆ ಅದನ್ನು ಮುಂದುವರೆಸುವುದಿಲ್ಲ. ನಂತರ ಸಿಟ್ಟಿನಿಂದ ಆಟದಿಂದ ಹೊರಗೆ ಹೋಗಿ ಕುಳಿತುಕೊಳ್ಳುತ್ತಾರೆ. ನಂತರ ಕ್ಯಾಪ್ಟನ್​ ದಿವ್ಯಾ ಸುರೇಶ್ ಅವರು ವೈಷ್ಣವಿಗೆ ಸಮಾಧಾನ ಮಾಡಿ ಮತ್ತೆ ಆಡುವಂತೆ ಮಾಡುತ್ತಾರೆ. ಆದರೆ ಈ ಆಟದಲ್ಲಿ ವೈಷ್ಣವಿ ತಾಳ್ಮೆ ಕಳೆದುಕೊಂಡ ರೀತಿ ಕಂಡು ವೀಕ್ಷಕರು ಶಾಕ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top