fbpx
ಸಮಾಚಾರ

ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 1,705 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 1,705 ಕೊರೊನಾ ವೈರಸ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಈವರೆಗೆ ದೃಢಪಟ್ಟ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 28,91,699 ಕ್ಕೆ ಏರಿಕೆ ಕಂಡಿದೆ.

ಶುಕ್ರವಾರ ರಾಜ್ಯಾದ್ಯಂತ 2,243 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರ ಒಟ್ಟು ಸಂಖ್ಯೆ 28,31,226ಕ್ಕೆ ಏರಿಕೆ ಕಂಡಿದೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 24,127 ಕ್ಕೆ ಇಳಿಕೆ ಕಂಡಿದೆ. ಚಿಕಿತ್ಸೆ ಫಲಿಸದೇ ಶುಕ್ರವಾರ ಕೂಡಾ 30 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 36,323ಕ್ಕೆ ಏರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಟ್ಟು 1,25,426 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಟ್ಟು 11 ಜಿಲ್ಲೆಗಳಲ್ಲಿ ಮರಣ ಶೂನ್ಯ ಸುತ್ತಿದ್ದು, ಬೆಂಗಳೂರು ನಗರ, ದಕ್ಷಿಣ ಕನ್ನಡ, ಮೈಸೂರು ಮತ್ತು ಉಡುಪಿಯಲ್ಲಿ ಕೊರೊನಾ ಪ್ರಕರಣಗಳ ಮೂರಂಕಿಯಲ್ಲಿ ದಾಖಲಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top