fbpx
ಸಮಾಚಾರ

ನಾನು ಸನ್ಯಾಸತ್ವ ಪಡೆದಿಲ್ಲ: ಚೈತ್ರಾ ಕೊಟ್ಟೂರು ಸ್ಪಷ್ಟನೆ

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೋಟೂರ್, “ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ…ಓಶೋ ಧ್ಯಾನ ಶಿಬಿರ” ಎಂದು ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಚೈತ್ರಾ ಅವರ ಈ ಪೋಸ್ಟ್ ನೋಡುತ್ತಿದ್ದಂತೆ ಕೆಲವರು ಚೈತ್ರಾ, ಸನ್ಯಾಸ ದೀಕ್ಷೆ ಪಡೆದಿದ್ದಾರೆ, ಎಲ್ಲವನ್ನು ಬಿಟ್ಟು ಮಠ ಸೇರಿದ್ದಾರೆ ಎಂದು ಮಾತನಾಡಲು ಆರಂಭಿಸಿದ್ದಾರೆ. ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲ ವದಂತಿಗಗಳಿಗೆ ತೆರೆ ಎಳೆದಿದ್ದಾರೆ.

 

 

ಓಶೋ ಸನ್ಯಾಸ ದೀಕ್ಷೆ ಅಂದ್ರೆ ಎಲ್ಲವನ್ನೂ ತ್ಯಜಿಸುವದಲ್ಲ. ಮಠವಂತೂ ಅಲ್ಲವೇ ಅಲ್ಲ. ಎಲ್ಲದರೊಳಗೆ ಇದ್ದುಕೊಂಡು ಬದುಕನ್ನು ಹೆಚ್ಚು ಸಂತೋಷಮಯವಾಗಿ ಅರ್ಥಪೂರ್ಣವಾಗಿ ಬದುಕುವುದು ಎಂದು ಚೈತ್ರಾ ಕೊಟ್ಟೂರು ಪೋಸ್ಟ್ ಮಾಡಿಕೊಂಡಿದ್ದಾರೆ.

ಈ ಮೊದಲು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಓಶೋ ಧ್ಯಾನ ಮಂದಿರದ ಗುರುಗಳೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ.. ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಅನಂತರ ಅಲ್ಲಿಯ ಸದಸ್ಯರ ಜೊತೆ ತೆಗೆದುಕೊಂಡ ಫೋಟೋ ಮತ್ತು ಅಲ್ಲಿ ನೃತ್ಯ ಮಾಡಿದ್ದ ವೀಡಿಯೋ ಸಹ ಹಂಚಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top