fbpx
ಸಮಾಚಾರ

ಜುಲೈ 24: ಇಂದಿನ ಪಂಚಾಂಗ ಮತ್ತು ದಿನ ಭವಿಷ್ಯ

ಜುಲೈ 24, 2021 ಶನಿವಾರ
ವರ್ಷ : 1943 ಪ್ಲಾವ
ತಿಂಗಳು : ಆಷಾಢ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ಪೂರ್ಣಿಮಾ 8:05 am ಪ್ರತಿಪತ್ 5:49 am
ನಕ್ಷತ್ರ : ಉತ್ತರಾಷಾಢ 12:40 pm
ಯೋಗ : ವಿಷ್ಕಂಭ 6:11 am ಪ್ರೀತಿ 3:15 am
ಕರಣ : ಬಾವ 8:05 am ಬಾಲವ 6:54 pm

Time to be Avoided
ರಾಹುಕಾಲ : 9:16 am – 10:51 am
ಯಮಗಂಡ : 2:00 pm – 3:35 pm
ದುರ್ಮುಹುರ್ತ : 6:07 am – 6:57 am, 6:57 am – 7:48 am
ವಿಷ : 4:26 pm – 5:57 pm
ಗುಳಿಕ : 6:07 am – 7:41 am

Good Time to be Used
ಅಮೃತಕಾಲ : 6:44 am – 8:13 am
ಅಭಿಜಿತ್ : 12:00 pm – 12:51 pm

Other Data
ಸೂರ್ಯೋದಯ : 6:03 am
ಸುರ್ಯಾಸ್ತಮಯ : 6:48 pm
ರವಿರಾಶಿ : ಕರ್ಕಾಟಕ
ಚಂದ್ರರಾಶಿ : ಮಕರ

 

 

 

ಕೆಲ ವಿಚಾರಗಳನ್ನು ಒಳ, ಹೊರ ಅರಿತೇ ಇತರರ ಜತೆ ಚರ್ಚಿಸುವುದು ಒಳ್ಳೆಯದು. ಯಾವುದೇ ನಿರ್ಧಾರ ನೀವು ತಳೆದಲ್ಲಿ ಅದನ್ನು ನಿಮ್ಮ ಹಿಂಬಾಲಕರು ಸ್ವಾಗತಿಸುವರು. ಹಿರಿಯರ ಆಶೀರ್ವಾದದಿಂದ ಇಂದಿನ ಕೆಲಸ ಸುಗಮವಾಗುವುದು.

ಟೀಕಿಸುವಂತಹ ಜನರ ಕುರಿತು ಆತಂಕ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತಲ ಜನರೇ ನಿಮ್ಮನ್ನು ಅಡ್ಡ ಹಾದಿಗೆ ಎಳೆಯುತ್ತಿರುವರು. ಹಾಗಾಗಿ ನಿಮ್ಮ ಬಳಿ ಬರುವ ಜನರ ಬಗ್ಗೆ ಎಚ್ಚರದಿಂದಿರಿ.

 

ಜೀವನದಲ್ಲಿ ಕಷ್ಟ ಸುಖಗಳು ಬೆಳಕು ಕತ್ತಲೆಯಂತೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ. ಚಿಂತಿಸದಿರಿ.

 

ಅತ್ಯಂತ ಚುರುಕುತನದಿಂದ ಇದ್ದ ನೀವು ಇಂದು ಆಲಸ್ಯ ತೋರುವುದರಿಂದ ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುವುದು. ಮನೋವೇಗವುಳ್ಳ ಆಂಜನೇಯನನ್ನು ಸ್ಮರಿಸಿ ಆಲಸ್ಯದಿಂದ ಹೊರಬನ್ನಿರಿ.

 

 

ಬೆಳ್ಳಗಿರುವುದೆಲ್ಲ ಹಾಲಲ್ಲ ಎಂಬ ಕಹಿ ಸತ್ಯ ನಿಮಗೆ ಗೊತ್ತಾಗುವ ಹೊತ್ತಿಗೆ ಅಧಿಕ ಹಣವನ್ನು ಕಳೆದುಕೊಳ್ಳುವಿರಿ. ಹಾಗಾಗಿ ಈದಿನ ವ್ಯವಹಾರ ಮಾಡುವಾಗ ಎದುರಾಳಿಯ ಪೂರ್ವಾಪೂರ್ವ ವಿಚಾರಗಳನ್ನು ತಿಳಿದುಕೊಳ್ಳಿರಿ.

 

 

ನಂಬಿದ ಜನರು ಕೈ ಕೊಡುತ್ತಿದ್ದಾರೆ ಎಂದು ಬೇಸರಿಸುವುದರಲ್ಲಿ ಅರ್ಥವಿಲ್ಲ. ಬೇವು ಬಿತ್ತಿ ಮಾವು ಪಡೆಯಲು ಸಾಧ್ಯವಿಲ್ಲ. ಅಂತೆಯೇ ನಿಮ್ಮ ನಡೆ-ನುಡಿಗಳಲ್ಲಿ ಬದಲಾವಣೆ ತಂದುಕೊಂಡಲ್ಲಿ ಒಳಿತಾಗುವುದು.

 

 

ಎಲ್ಲ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿರಿ.  ನೀವು ಯಶಸ್ಸು ಹೊಂದುವಿರಿ.

 

 

ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಇಂದು ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು. ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು.

ಹಣದ ಹರಿವು ಹೆಚ್ಚಾಗಲಿದೆ. ಖರ್ಚು ವೆಚ್ಚಗಳ ಮೇಲೆ ನಿಗಾ ಇಡಿ. ಕುಟುಂಬದವರ ಅಭಿಪ್ರಾಯಗಳಿಗೆ ಮನ್ನಣೆ ಕೊಡುವಿರಿ. ಇದರಿಂದ ಸಮಾಜದಲ್ಲಿ ನಿಮ್ಮ ಸ್ಥಾನಮಾನಗಳು ಹೆಚ್ಚಾಗುವುದು.

 

ಯಾರೊಂದಿಗೂ ಇಂದು ಅಸಮಾಧಾನ ವ್ಯಕ್ತಪಡಿಸುವುದು ಒಳ್ಳೆಯದಲ್ಲ. ಇನ್ನೊಬ್ಬರ ವಿಷಯದಲ್ಲಿ ಮೂಗು ತೂರಿಸದಿರಿ. ವೈಯಕ್ತಿಕ ಕಾರ್ಯಕಲಾಪಗಳಲ್ಲಿ ಯಶಸ್ಸು ದೊರೆಯುವುದು. ಮಕ್ಕಳ ಪ್ರಗತಿಯು ತುಸು ನೆಮ್ಮದಿ ನೀಡುವುದು.

 

ಆಶಾವಾದವೇ ಜೀವನ, ನಿರಾಶಾವಾದವೇ ಮರಣ ಎನ್ನುವಂತೆ ಈದಿನ ಆಶಾವಾದದಿಂದ ಇರುವ ದಿನ. ನಿಮ್ಮ ಎಲ್ಲ ಧನಾತ್ಮಕ ಚಿಂತನೆಗಳು ಒಂದುಗೂಡುವುದರಿಂದ ಶುಭ ವಾರ್ತೆಯನ್ನು ಕೇಳುವಿರಿ. ಅದರಿಂದ ಸಂತಸವಾಗುವುದು.

ನಿಮ್ಮ ಕಾರ್ಯ ಯೋಜನೆಗಳು ನೀವು ಬಯಸಿದಂತೆ ಆಗುವುದರಿಂದ ವಿರೋಧಿಗಳಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸುವುದು. ಸಹೋದ್ಯೋಗಿಗಳು ನಿಮ್ಮ ಬೆನ್ನು ಚಪ್ಪರಿಸಿ ನಿಮ್ಮನ್ನು ಉತ್ತೇಜಿಸುವರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top