fbpx
ಸಮಾಚಾರ

ಹೆಸರು ಬದಲಿಸಿಕೊಂಡ ಬಿಗ್ ಬಾಸ್ ಖ್ಯಾತಿಯ ಚೈತ್ರ ಕೊಟ್ಟೂರು

‘ಬಿಗ್ ಬಾಸ್ ಕನ್ನಡ 7’ ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದ ಸ್ಪರ್ಧಿಗಳ ಪೈಕಿ ಚೈತ್ರಾ ಕೋಟೂರು ಕೂಡ ಒಬ್ಬರು. ಈ ಮಧ್ಯೆ ಸರಳವಾಗಿ ಮದುವೆಯಾದ ಚೈತ್ರಾ ಕೋಟೂರು ಬಳಿಕ ವಿವಾದಕ್ಕೀಡಾದರು. ಚೈತ್ರಾ ಕೋಟೂರು ಮದುವೆ ಪೊಲೀಸ್ ಠಾಣೆ ಮೆಟ್ಟಿಲೇರಿತು. ಇದರಿಂದ ಮಾನಸಿಕವಾಗಿ ನೊಂದಿದ್ದ ಚೈತ್ರಾ ಕೋಟೂರು ಇದೀಗ ಆಧ್ಯಾತ್ಮದ ಕಡೆ ಮುಖ ಮಾಡಿದ್ದಾರೆ.

ಧ್ಯಾನ ಮತ್ತು ಆಧ್ಯಾತ್ಮದ ಕಡೆ ವಾಲಿರುವ ಚೈತ್ರಾ ಕೋಟೂರು ಓಶೋ ಧ್ಯಾನ ಮಂದಿರ ಸೇರಿದ್ದಾರೆ. ಬೆಳಗಾವಿಯಲ್ಲಿರುವ ಓಶೋ ಧ್ಯಾನ ಶಿಬಿರದಲ್ಲಿ ಚೈತ್ರಾ ಕೋಟೂರು ಪಾಲ್ಗೊಂಡಿದ್ದಾರೆ. ಆಧ್ಯಾತ್ಮದ ಕಡೆ ಆಸಕ್ತಿ ಬೆಳೆಸಿಕೊಂಡಿರುವ ಚೈತ್ರಾ ಕೋಟೂರು ತಮ್ಮ ಹೆಸರನ್ನು ‘ಮಾ ಪ್ರಗ್ಯಾ ಭಾರತಿ’ ಎಂದು ಬದಲಾಯಿಸಿಕೊಂಡಿದ್ದಾರೆ.

‘ಮಾ ಪ್ರಗ್ಯಾ ಭಾರತಿ’ಯಾದ ಚೈತ್ರ:
ಚೈತ್ರಾ ಕೊಟೂರುರವರು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಓಶೋ ಧ್ಯಾನ ಮಂದಿರದ ಗುರುಗಳೊಂದಿಗೆ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ಪ್ರೀತಿಯ ಗುರುಗಳಾದ ಸ್ವಾಮಿ ಗೋಪಾಲ ಭಾರತಿ ಅವರೊಂದಿಗೆ ಮಾ ಪ್ರಗ್ಯಾ ಭಾರತಿ.. ಓಶೋ ಧ್ಯಾನ ಶಿಬಿರ.. ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top