fbpx
ಸಮಾಚಾರ

ಮೇಘನಾ ರಾಜ್​ ಬದುಕಲ್ಲಿ ಹೊಸ ಬೆಳಕು; ವರ್ಷದ ನಂತರ ಚಿತ್ರರಂಗಕ್ಕೆ ರೀ ಎಂಟ್ರಿ

ನಟಿ ಮೇಘನಾ ರಾಜ್‌ ತೆರೆಮೇಲೆ ಕಾಣಿಸಿಕೊಳ್ಳದೇ ತುಂಬ ಸಮಯಗಳೇ ಆಗಿದ್ದವು. ಇನ್ನು, ಮಗ ಹುಟ್ಟಿದ ಮೇಲೆ ಅವನ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದರು. ಇದೀಗ ಮಗ ಜೂ. ಚಿರುಗೆ 9 ತಿಂಗಳು ತುಂಬಿವೆ. ಈ ಸಂದರ್ಭದಲ್ಲೇ ಒಂದು ಗುಡ್ ನ್ಯೂಸ್ ಕೂಡ ನೀಡಿದ್ದಾರೆ ಮೇಘನಾ ರಾಜ್. ಅಷ್ಟಕ್ಕೂ ಏನದು ಗುಡ್‌ ನ್ಯೂಸ್? ಮುಂದೆ ಓದಿ.

ಬ್ಯಾಕ್​ ಟು ಬ್ಯಾಕ್​ ಸಿನಿಮಾ ಮಾಡುತ್ತ ಬ್ಯುಸಿ ಆಗಿದ್ದ ಮೇಘನಾ ಅವರು ಕಳೆದೊಂದು ವರ್ಷದಿಂದೀಚೆಗೆ ನಟನೆಯಿಂದ ದೂರ ಉಳಿದುಕೊಂಡಿದ್ದರು. ಮದುವೆ, ಸಂಸಾರದ ಕಡೆಗೆ ಅವರು ಗಮನ ಹರಿಸಿದ್ದರು. ಬದುಕಿನಲ್ಲಿ ನಡೆದ ಕಹಿ ಘಟನೆಗಳಿಂದ ಅವರು ಸುಧಾರಿಸಿಕೊಳ್ಳಲು ಕೂಡ ಸಮಯ ಹಿಡಿಯಿತು. ಈಗ ಆ ಎಲ್ಲ ಸಂಕಷ್ಟಗಳನ್ನು ಎದುರಿಸಿ ಬಂದಿರುವ ಮೇಘನಾ ರಾಜ್​ ಅವರು ಮತ್ತೆ ನಟನೆಗೆ ಮರಳಿದ್ದಾರೆ.

 

 

ಮೇಘನಾ ಸರ್ಜಾ ತಾಯಿಯಾದ ಬಳಿಕ ಶೀಘ್ರದಲ್ಲೇ ಬಣ್ಣದ ಲೋಕಕ್ಕೆ ಹಿಂದಿರುಗುವ ಸುಳಿವನ್ನು ಕೆಲ ದಿನಗಳ ಹಿಂದೆಯೇ ನೀಡಿದ್ದರು. ಇದೀಗ ಕ್ಯಾಮೆರಾ ಫೇಸ್ ಮಾಡಿ, ಮತ್ತೆ ಹಳೆಯ ಜೀವನದ ಲಯಕ್ಕೆ ಮರಳುತ್ತಿದ್ದಾರೆ. ಇವತ್ತು ಜೂನಿಯರ್ ಚಿರುಗೆ ಒಂಬತ್ತು ತಿಂಗಳು. ವರ್ಷದ ಬಳಿಕ ಕ್ಯಾಮೆರಾ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ, ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ಶೂಟಿಂಗ್​ ಸೆಟ್​ನಲ್ಲಿ ಡೈಲಾಗ್​ ಓದುತ್ತ ನಿಂತಿರುವ ಮೇಘನಾ ಅವರನ್ನು ಕಂಡು ಅಭಿಮಾನಿಗಳು ಖುಷಿ ಆಗಿದ್ದಾರೆ. ತಾವು ಕ್ಯಾಮೆರಾ ಎದುರಿಸುತ್ತಿರುವುದು ಯಾವ ಪ್ರಾಜೆಕ್ಟ್​ಗಾಗಿ ಎಂಬ ಮಾಹಿತಿಯನ್ನು ಮೇಘನಾ ಸದ್ಯಕ್ಕೆ ಬಿಟ್ಟುಕೊಟ್ಟಿಲ್ಲ. ಸಿನಿಮಾ, ಜಾಹೀರಾತು ಅಥವಾ ಫೋಟೋಶೂಟ್​ ಈ ಪೈಕಿ ಯಾವುದಕ್ಕಾಗಿ ಶೂಟಿಂಗ್​ ಮಾಡುತ್ತಿದ್ದೀರಿ ಎಂದು ಅಭಿಮಾನಿಗಳು ಕೌತುಕದ ಪ್ರಶ್ನೆ ಇಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top