fbpx
ಸಮಾಚಾರ

ನಟಿ ಪ್ರಿಯಾಮಣಿ ಮದುವೆ ವಿವಾದ: ವಿವಾಹದ ಬಗೆಗಿನ ಆರೋಪದ ಕುರಿತು ಪ್ರಿಯಾಮಣಿ ಪ್ರತಿಕ್ರಿಯೆ

ನಟಿ ಪ್ರಿಯಾಮಣಿ ಅವರ ಮದುವೆ ವಿಷಯಕ್ಕೆ ಸಂಬಂಧಿಸಿದ್ದಂತೆ ಅವರ ಪತಿ ಮುಸ್ತಫಾ ರಾಜ್​ ಅವರ ಮೊದಲ ಪತ್ನಿ ಆಯೆಷಾ ಅವರು ಮಾಡಿರುವ ಆರೋಪದ ವಿಷಯ ಸದ್ಯ ಚರ್ಚೆಯಾಗುತ್ತಿದೆ. ಮುಸ್ತಫಾ ರಾಜ್ ಅವರು ತನಗಿನ್ನೂ ವಿಚ್ಛೇದನ ನೀಡಿಲ್ಲ. ಹೀಗಾಗಿಯೇ ಕಾನೂನಿನ ಪ್ರಕಾರ ಮುಸ್ತಫಾ ಅವರ ಮತ್ನಿ ನಾನೇ. ಪ್ರಿಯಾಮಣಿ ಅವರ ಮದುವೆ ಅಸಿಂದು ಎಂದಿದ್ದಾರೆ. ಈ ಕುರಿತಾಗಿ ಪ್ರಿಯಾಮಣಿ ಸಹ ಸ್ಪಷ್ಟನೆ ಕೊಟ್ಟಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾಮಣಿ, “ನನ್ನ ಹಾಗೂ ಮುಸ್ತಫಾ ರಾಜ್ ಸಂಬಂಧ ಹೇಗಿದೆ ಎಂದು ಪ್ರಶ್ನಿಸಿದರೆ ತುಂಬ ಭದ್ರತೆಯಿಂದ ಕೂಡಿದೆ ಎಂದು ಹೇಳುವೆ. ಈಗ ಅವರು ಅಮೆರಿಕದಲ್ಲಿದ್ದಾರೆ. ಮುಸ್ತಫಾ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ನಾವಿಬ್ಬರೂ ಮಾತನಾಡಿಕೊಳ್ಳುತ್ತೇವೆ. ಕೆಲಸ ತುಂಬ ಇದ್ದಾಗ ಒಮ್ಮೊಮ್ಮೆ ಹಾಯ್, ಹೆಲೋ ಅಂತಲಾದರೂ ಮೆಸೇಜ್ ಮಾಡಿಕೊಳ್ಳುತ್ತೇವೆ” ಎಂದು ಪ್ರಿಯಾಮಣಿ ಹೇಳಿದ್ದಾರೆ.

“ಮುಸ್ತಫಾ ತುಂಬ ಬ್ಯುಸಿಯಿದ್ದರೆ ಫ್ರೀ ಮಾಡಿಕೊಂಡು ಕಾಲ್ ಮಾಡ್ತಾರೆ, ಮೆಸೇಜ್ ಮಾಡ್ತಾರೆ. ನಾನು ಶೂಟಿಂಗ್‌ನಲ್ಲಿ ಬ್ಯುಸಿಯಿದ್ದರೆ ನಾನು ಕೂಡ ಹಾಗೆ ಮಾಡುವೆ. ನಿತ್ಯ ನಾವಿಬ್ಬರು ಮಾತನಾಡಲು ಪ್ರಯತ್ನಪಡುತ್ತೇವೆ. ಆಮೇಲೆ ನೀವು ಚೆನ್ನಾಗಿದ್ದೀರಾ ಅಂತಲಾದರೂ ಕೇಳಿಕೊಳ್ಳುತ್ತೇವೆ. ನಮ್ಮ ಸಂಬಂಧ ಭದ್ರತೆಯಿಂದ ಕೂಡಿದೆ. ನಾವಿಬ್ಬರೂ ಮಾತನಾಡಿಕೊಳ್ಳುತ್ತೇವೆ, ಅದೇ ನಮ್ಮ ಸಂಬಂಧದ ಕೀ” ಎಂದು ಪ್ರಿಯಾಮಣಿ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top