fbpx
ಸಮಾಚಾರ

ರಾಬರ್ಟ್ ಸಿನಿಮಾ ನಂತರ ಮತ್ತೊಂದು ದೊಡ್ಡ ಕನ್ನಡ ಚಿತ್ರಕ್ಕೆ ಹಾಡಿದ ಮಂಗ್ಲೀ: ಯಾವ ಚಿತ್ರ ಗೊತ್ತಾ?

“ಕಣ್ಣೇ ಅಧಿರಿಂದಿ ಫೈಟ್ ಚೆಧಿರಿಂದಿ ಕಾಲೇ ನಿಲವದು ಪಿಲಗ; ನಿನ್ನಟಿಕೆಲ್ಲಿ ಗಮ್ಮತಿಗುಂದಿ ಗುಂಡೆಲ ಲೊಲ್ಲಿ ಸಮ್ಮಗ ಉಂದಿ…..” ರಾಬರ್ಟ್ ಚಿತ್ರದ ತೆಲುಗು ಅವತರಣಿಕೆಯ ಈ ಸಾಂಗ್ ಸಖತ್ ಹಿಟ್ ಆಗಿತ್ತು. ಸಾಂಗ್ ಮೂಲಕ ತೆಲುಗು ಗಾಯಕಿ ಮಂಗ್ಲಿ ಕನ್ನಡ ನಾಡಿನ ಯುವಜನತೆಯ ಎದೆಬಡಿತ ಹೆಚ್ಚಿಸಿದ್ದರು.. ಅಷ್ಟೇ ಅಲ್ಲದೇ ಈ ಹಾಡಿನ ಮೂಲಕ ಇಂಟರ್ನೆಟ್ ಸೆನ್ಸೇಷನ್ ಆಗಿದ್ದು, ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಾಗಿದೆ.

 

 

‘ರಾಬರ್ಟ್’ ಸಿನಿಮಾದ ಸಕ್ಸಸ್ ಮಂಗ್ಲಿ ಮತ್ತೊಂದು ದೊಡ್ಡ ಕನ್ನಡ ಸಿನಿಮಾದ ಹಾಡಿಗೆ ದನಿಯಾಗಿದ್ದಾರೆ. ಪ್ರೇಮ್ ನಿರ್ದೇಶನದಲ್ಲಿ ತಾಯಾರಾಗುತ್ತಿರುವ ಏಕ್ ಲವ್ ಯಾ ಸಿನಿಮಾದ ಹಾಡಿಗೆ ಮಂಗ್ಲಿ ಧ್ವನಿಯಾಗಿದ್ದಾರೆ.. ಅರ್ಜುನ್ ಜನ್ಯ ಅವರ ಸ್ಟುಡಿಯೋದಲ್ಲಿ ಹಾಡಿನ ರೆಕಾರ್ಡಿಂಗ್ ಮುಗಿದಿದ್ದು, ಈ ವೇಳೆ ನಿರ್ದೇಶಕ ಪ್ರೇಮ್ ಮತ್ತು ನಾಯಕನಟ ರಾಣಾ ಜೊತೆಯಲ್ಲಿದ್ದರು.

ಈ ಕುರಿತು ಸ್ವತಃ ಮಂಗ್ಲಿ ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. ”ಲೆಜೆಂಡರಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡಿದ್ದು ಮತ್ತು ಅವರನ್ನು ಭೇಟಿ ಮಾಡಿದ್ದು ಖುಷಿ ಸಂಗತಿ. ಅವರದ್ದು ವಿಶಾಲ ಹೃದಯದ ವ್ಯಕ್ತಿತ್ವ. ಅವರ ಪ್ರಾಜೆಕ್ಟ್‌ನಲ್ಲಿ ಭಾಗವಾಗಿದ್ದು ನಿಜಕ್ಕೂ ಹೆಮ್ಮೆ ಎನಿಸಿದೆ” ಎಂದು ಮಂಗ್ಲಿ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top