fbpx
ಸಮಾಚಾರ

‘ಪುಡಂಗ್’ ಹೇಳಿಕೆ ವಿವಾದ: ಮುನಿಸು ಮರೆತು ಮತ್ತೆ ಒಂದಾದ ದರ್ಶನ್, ರಕ್ಷಿತಾ ಪ್ರೇಮ್ ಪತ್ನಿ ಹೇಳಿದ್ದೇನು ಗೊತ್ತಾ?

ಇತ್ತೀಚೆಗಷ್ಟೇ ಪತಿ ಪ್ರೇಮ್ ವಿರುದ್ಧ ನಟ ದರ್ಶನ್ ನೀಡಿದ್ದ ಹೇಳಿಕೆಯಿಂದ ಬೇಸರಗೊಂಡಿದ್ದ ನಟಿ ರಕ್ಷಿತಾ ಪ್ರೇಮ್ ಇದೀಗ ಮುನಿಸು ಮರೆತು ದರ್ಶನ್ ಜೊತೆ ಮತ್ತೆ ಒಂದಾಗಿದ್ದಾರೆ. ದಾಸನ ಜೊತೆ ಫೋಟೋ ತೆಗೆಸಿಕೊಂಡು ಮುನಿಸು ಮರೆತಿದ್ದೇವೆ ಎಂದು ಹೇಳಿದ್ದಾರೆ.

ಹೌದು. ಈ ಸಂಬಂಧ ಇನ್ ಸ್ಟಾದಲ್ಲಿ ಫೋಟೋ ಹಾಕಿಕೊಂಡಿರುವ ರಕ್ಷಿತಾ, “ಕೆಲವೊಂದು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ದರ್ಶನ್ ಜೊತೆಗಿದ್ದ ಮುನಿಸು ಮರೆತು ಮತ್ತೆ ಒಂದಾಗಿದೆ ಅಂತಾನೇ ಹೇಳಬಹುದು.

 

 

ರಕ್ಷಿತಾ ಬರೆದುಕೊಂಡಿದ್ದೇನು..?
ಕೆಲವೊಂದು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ. ನೀನು ಯಾವಾಗಲೂ ನನ್ನ ಜೊತೆಗೆ ಇರುತ್ತೀಯಾ ಎಂದು ನನಗೆ ಗೊತ್ತಿದೆ. ನಿನ್ನಂತ ಒಳ್ಳೆಯ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಪಡೆದಿದ್ಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ದರ್ಶನ್ ಗೆ ಟ್ಯಾಗ್ ಮಾಡಿದ್ದಾರೆ.

ಏನಿದು ವಿಚಾರ:
ದರ್ಶನ್ ನಿರ್ದೇಶಕ ಪ್ರೇಮ್ ರನ್ನು ಪುಡಂಗಿನಾ? ಎಂಬ ಹೇಳಿಕೆಯೊಂದನ್ನು ನೀಡಿದ್ದರು. ಈ ವಿಚಾರ ನಿರ್ದೇಶಕ ಪ್ರೇಮ್ ಹಾಗೂ ರಕ್ಷಿತಾ ಅವರಿಗೆ ನೋವುಂಟು ಮಾಡಿತ್ತು. ದರ್ಶನ್ ಈ ರೀತಿ ಹೇಳಿಕೆ ನೀಡದ ಬೆನ್ನಲ್ಲೇ ಪ್ರೇಮ್ ಸುದೀರ್ಘವಾಗಿ ಪತ್ರ ಬರೆಯುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಪತಿ ಪೋಸ್ಟ್ ಹಾಕುತ್ತಿದ್ದಂತೆಯೇ ರಕ್ಷಿತಾ ಕೂಡ ದರ್ಶನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top