ಮೊನ್ನೆ ಭಾನುವಾರ ಇಡೀ ದೇಶವೇ ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿತ್ತು. ಅದೇ ರೀತಿ ಬೆಂಗಳೂರಿನ ಎಲ್.ಆರ್ ಬಂಡೆ ಸರ್ಕಲ್ ನಲ್ಲಿ ಮಂಗಳಮುಖಿ ಸಮುದಾಯದವರು ಕೂಡ ಧ್ವಜಾರೋಹಣ ಮಾಡಿ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದರು.
ಇದೆ ವೇಳೆ ಭರವಸೆ ಟ್ರಸ್ಟ್ ಸಹಯೋಗದೊಂದಿಗೆ, ಬಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಮಂಗಳಮುಖಿಯರ ಬಗ್ಗೆ ಜನರಲ್ಲಿ ಇರುವ ತಾರತಮ್ಯ ಧೋರಣೆ ಅನುಸರಿಸದಂತೆ ಮನವಿ ಮಾಡಿಕೊಳ್ಳಲಾಯಿತು, ಮಂಗಳಮುಖಿ ಸಮುದಾಯದವರ ಬಗ್ಗೆ ಜನರಲ್ಲಿ ಇರುವ ತಾತ್ಸಾರ ಮನೋಭಾವ ಬದಲಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
“ನಾವೆಂದರೆ ಭಯಬೇಡ ನಾವೂ ನಿಮ್ಮ ಹಾಗೆ ಮನುಷ್ಯರು”, “ಅನುಕಂಪ ಬೇಡ ಗೌರವ ಕೊಡಿ”, “ಬದುಕಿ ಬದಕಲು ಬಿಡಿ”, “ಚಿಲ್ಲರೆ ಕಾಸಲ್ಲ, ಸ್ವಾತಂತ್ರ್ಯ, ಸಮಾನತೆ, ಗೌರವ ಕೊಡಿ” ಹೀಗೆ ಮಂಗಳಮುಖಿಯರ ಒಡಲಿನ ನೋವನ್ನು ಬಿತ್ತಿ ಪತ್ರ ಪ್ರದರ್ಶಿಸುವ ಮೂಲಕ ತೋಡಿಕೊಳ್ಳಲಾಯಿತು,
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
