ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಅವರ ಕಡೆಯಿಂದ ಮತ್ತೊಂದು ಖುಷಿಯ ವಿಷಯ ಸಿಕ್ಕಿದೆ. ‘Act 1978 ‘ ಸಿನಿಮಾ ಮಾಡಿದ ಮಂಸೋರೆಗೆ ಸಾಕಷ್ಟು ಒಳ್ಳೆಯ ಪ್ರಶಂಸೆ ಸಿಕ್ಕಿತ್ತು. ಈಗ ಮಂಸೋರೆ ಟಾಲಿವುಡ್ ನಟಿ ಸಾಯಿ ಪಲ್ಲವಿ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರನ್ನು ತೆಲುಗು ಚಿತ್ರರಂಗದ ಕೆಲವು ಚಲನಚಿತ್ರ ನಿರ್ಮಾಪಕರು ಸಂಪರ್ಕಿಸಿದ್ದಾರೆ, ಮನ್ಸೋರೆ ಕರ್ನಾಟಕ ರಾಜಕೀಯ ಬೆಳವಣಿಗೆಗಳನ್ನು ಕುರಿತ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ.ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾಗಾಗಿ ತಮಿಳು ನಟಿ ಸಾಯಿಪಲ್ಲವಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಖಚಿತ ಪಡಿಸಿರುವ ಮನ್ಸೋರೆ, ಚರ್ಚೆಯು ಬಹಳ ಪ್ರಾಥಮಿಕ ಹಂತದಲ್ಲಿದ್ದು, ಸಾಯಿ ಪಲ್ಲವಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಸಿನಿಮಾ ಕುರಿತು ಮಂಸೋರೆ ಸಾಯಿ ಪಲ್ಲವಿ ಅವರೊಂದಿಗೆ ಫೋನ್ ಸಂಭಾಷಣೆ ನಡೆಸಿದ್ದು, ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಂಸೋರೆ ಸ್ಟೋರಿ ಕೇಳಿ ಸಾಯಿ ಪಲ್ಲವಿ ಸಖತ್ ಖುಷಿಪಟ್ಟಿದ್ದಾರೆ. ಫೈನಲ್ ಸ್ಕ್ರಿಪ್ಟ್ ಕಳುಹಿಸಲು ಹೇಳಿದ್ದಾರೆ. ವಿವಾಹಕ್ಕೋಸ್ಕರ ಬ್ರೇಕ್ ತೆಗೆದುಕೊಂಡಿದ್ದೆ. ಆದಷ್ಟು ಬೇಗ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಸೂಕ್ಷ್ಮ ವಿಚಾರಗಳನ್ನಿಟ್ಟು ಸಿನಿಮಾ ಮಾಡಿರುವ ಮಂಸೋರೆ ಈ ಸಿನಿಮಾದ ಮೂಲಕ ದಕ್ಷಿಣ ಭಾರತದ ಗಮನ ಸೆಳೆಯಬಹುದು. ಅವರ ಚಿತ್ರಕ್ಕೆ ಸಾಯಿ ಪಲ್ಲವಿಯಂಥಾ ನಟಿ ಜೊತೆಗೂಡಿದರೆ ಸಿನಿಮಾದ ರೇಂಜೇ ಬದಲಾಗಬಹುದು. ಇದರ ನಡುವೆ ಆಕ್ಟ್ 1978 ರ ತೆಲುಗು ಮತ್ತು ಹಿಂದಿ ರೀಮೇಕ್ ಹಕ್ಕುಗಳನ್ನು ಮಾರಾಟ ಮಾಡಲಾಗಿದೆ. ಇಂಥಾ ಸಕ್ಸಸ್ ನಡುವೆ ಇರುವ ಮಂಸೋರೆ ಆದಷ್ಟು ಬೇಗ ಸಾಯಿ ಪಲ್ಲವಿ ಅವರ ಜೊತೆಗೆ ಹೊಸ ಸಿನಿಮಾದೊಂದಿಗೆ ಬರಲಿ ಎಂಬುದು ಕನ್ನಡಿಗರ ಆಶಯ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
