fbpx
ಸಮಾಚಾರ

ವಿವಿಧ ಬೇಡಿಕೆಗಳನ್ನಿಟ್ಟು ವಿವಿಧ ಕೇಂದ್ರ ಸಚಿವರನ್ನು ಭೇಟಿಯಾದ ಏಕೈಕ ಕರುನಾಡ ಸಂಸದ ಜಿ.ಸಿ ಚಂದ್ರಶೇಖರ್

ಕರ್ನಾಟಕ ಮತ್ತು ಕನ್ನಡಿಗರಿಗೆ ಸಂಭಂದಿಸಿದ ಸಮಸ್ಯೆಗಳ ಪರವಾದ ನಿರಂತರ ಹೋರಾಟದಲ್ಲಿ ಗುರುತಿಸಿಕೊಳ್ಳುವ ಮೂಲಕ ಕರ್ನಾಟಕದ ಡೈನಾಮಿಕ್ ಸಂಸದ ಎಂದೇ ಖ್ಯಾತಿ ಗಳಿಸಿರುವ ಜಿ.ಸಿ ಚಂದ್ರಶೇಖರ್ ಅವರು ಸಂಸತ್ ಒಳಗೆ ಮತ್ತು ಹೊರಗೆ ಸದಾಕಾಲ ಕನ್ನಡನಾಡು, ಕನ್ನಡಿಗರ ಸಮಸ್ಯೆಗಳಿಗೆ ದನಿಯಾಗುತ್ತಾರೆ.

ಈ ಭಾರಿ ಸಂಸತ್ ಕಲಾಪಕ್ಕೆಂದು ದೆಹಲಿಗೆ ಹೋಗಿದ್ದ ಜಿ. ಸಿ ಚಂದ್ರಶೇಖರ್ ಅವರು ಕೇವಲ ಕಲಾಪಕ್ಕೆ ಮಾತ್ರ ಸೀಮಿತವಾಗದೆ ಕನ್ನಡಿಗರ ಕೆಲ ಅಹವಾಲುಗಳಿಗೆ ಪರಿಹಾರ ಒದಗಿಸುವ ಪ್ರಯತ್ನ ಪಟ್ಟಿದ್ದಾರೆ. ಈ ಭಾರಿಯ ದೆಹಲಿ ಭೇಟಿಯಲ್ಲಿ ಜಿ. ಸಿ ಚಂದ್ರಶೇಖರ್ ವಿವಿಧ ಬೇಡಿಕೆಗಳನ್ನಿಟ್ಟು ವಿವಿಧ ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ. ಈ ಮೂಲಕ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್,ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ರೈಲ್ವೆ ಮಂತ್ರಿಯಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ವಿಚಾರವಾಗಿ ಸಂಸದ ಜಿ.ಸಿ ಚಂದ್ರಶೇಖರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.

 

 

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಗರಣದಲ್ಲಿ ಮೋಸ ಹೋಗಿರುವ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡುವುದು ಮತ್ತು IBPS ನೋಟಿಫಿಕೇಶನ್ ಅನ್ನು 2014 ರ ಹಿಂದೆ ಇದ್ದಂತೆ ಮರಳಿ ತರುವ ಬಗ್ಗೆ ಜಿಸಿ ಚಂದ್ರಶೇಖರ್ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಎರಡೂ ವಿಚಾರಗಳ ಬಗ್ಗೆ ವಿಸ್ತಾರವಾಗಿ ಚರ್ಚಿಸಿದ್ದಾರೆ,.

 

 

ಬೆಮಲ್‌ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸರ್ಕಾರಿ ಸ್ವಾಮ್ಯದ ಕರ್ನಾಟಕದ ಮುಕುಟ ಮಣಿ BEML ನ 26% ಶೇರ್ ಅನ್ನು ಖಾಸಗಿಕರಣ ಮಾಡಲು ಮುಂದಾಗಿರುವ ನಡೆಯನ್ನು ಹಿಂಪಡೆಯಬೇಕು ಎಂದು ಚಂದ್ರಶೇಖರ್ ಮನವಿ ಮಾಡಿದರು.

 

 

ಕೇಂದ್ರ ಜಲಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಎಂದು ಪತ್ರದ ಮುಖೇನ ಮನವಿ ಮಾಡಿದ್ದಾರೆ. ಮೇಕೆದಾಟು ಯೋಜನೆ ಮುಖ್ಯವಾಗಿ ಬೆಂಗಳೂರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಿ ರೂಪಿಸಿದ್ದು ಸೆಂಟ್ರಲ್ ವಾಟರ್ ಕಮಿಷನ್ ಹಾಗು ಜಲಶಕ್ತಿಯ ದ್ವಂದ್ವ ನೀತಿಗಳಿಂದಾಗಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಎಂದು ಸಂವಿಧಾನದಲ್ಲಿ ಹೇಳಿದ್ದರು ಇದನ್ನು ರಾಜಕೀಯ ಹಾಗು ಪ್ರತಿಷ್ಠೆಯ ವಿಚಾರವಾಗಿ ರೂಪತಳೆದು ಸಾಮಾನ್ಯ ಜನರು ಕಷ್ಟಪಡುವಂತಾಗಿದೆ. ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಸಹ ಇಚ್ಛಾಶಕ್ತಿಯ ಕೊರತೆಯಿಂದ ಹಾಗು ಕರ್ನಾಟಕ,ತಮಿಳು ನಾಡು ಎರಡು ರಾಜ್ಯಗಳ ನಡುವಿನ ತೊಂದರೆ ನಿವಾರಿಸುವ ಬದಲು ಅದನ್ನೇ ರಾಜಕೀಯದ ಸರಕು ಮಾಡಿಕೊಳ್ಳುತ್ತಿರುವ ಬಗ್ಗೆ ಆದಷ್ಟು ಬೇಗನೆ ಕೇಂದ್ರ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಕಾಯಬೇಕು ಎಂದು ಜಿ.ಸಿ ಚಂದ್ರಶೇಖರ್ ಮನವಿ ಪತ್ರ ಸಲ್ಲಿಸಿದ್ದಾರೆ.

 

 

ಕೇಂದ್ರ ರೈಲ್ವೆ ಮಂತ್ರಿಯಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಸಮಸ್ಯೆಯ ಬಗ್ಗೆ ಚರ್ಚಿಸಿದ್ದಾರೆ. ಕಲ್ಬುರ್ಗಿಗೆ 2014 ರಲ್ಲೇ ಮಂಜೂರಾಗಿದ್ದ ರೈಲ್ವೆ ಡಿವಿಷನ್ ಗೆ ರಾಜ್ಯ ಸರ್ಕಾರದಿಂದ ಬೇಕಿರುವ ಜಾಗ ಕೂಡ ಮಂಜೂರಾಗಿದ್ದು ಈ ವರ್ಷ SAG ರಿಪೋರ್ಟ್ ನೆಪವೊಡ್ಡಿ ಪ್ರಾಜೆಕ್ಟ್ ನಿರಾಕರಿಸಿರುವುದು ಹಾಗೆಯೇ SAG ರಿಪೋರ್ಟ್ ನಲ್ಲೆ ಇರದ ರಾಯಗಡಕ್ಕೆ ರೈಲ್ವೆ ಡಿವಿಷನ್ ಮತ್ತು ವಿಶಾಖಪಟ್ಟಣಕ್ಕೆ ಮಂಜೂರು ಮಾಡಿ ಈ ವಿಷಯದಲ್ಲಿ ಆರ್ಟಿಕಲ್ 371 ಜೆ ಸ್ಥಾನಮಾನ ಪಡೆದು ಹಾಗು ಹಿಂದುಳಿದ ಪ್ರದೇಶವಾದ ಕಾರಣದಿಂದ ರಾಜಕೀಯ ಮಾಡದೆ ಆದಷ್ಟು ಬೇಗ ಪುನರ್ ಪರಿಶೀಲಿಸಿ ಯೋಜನೆ ಜಾರಿಗೊಳಿಸಬೇಕು ಎಂದು ಸಚಿವರ ಬಳಿ ಜಿ.ಸಿ ಚಂದ್ರಶೇಖರ್ ಮನವಿ ಮಾಡಿದರು.

ಬೇರೆ ಸಂಸದರುಗಳು ದೆಹಲಿಗೆ ಹೋದಾಗ ಒಬ್ಬ ಸಚಿವರನ್ನು ಅಥವಾ ಇಬ್ಬರು ಸಚಿವರನ್ನು ಭೇಟಿಯಾಗಿ ನಿರ್ದಿಷ್ಟ ವಿಚಾರದ ಬಗ್ಗೆ ಚರ್ಚಿಸುವುದು ಸಾಮಾನ್ಯ ಆದರೆ ಹೀಗೆ ಒಂದು ಭಾರಿ ದೆಹಲಿಗೆ ಹೋದಾಗ ಕರುನಾಡ ಪರವಾಗಿ ಅನೇಕ ಕೆಲಸಗಳನ್ನ ಮುಗಿಸಿಕೊಂಡು ಬರುವ ಜಿ. ಸಿ ಚಂದ್ರಶೇಖರ್ ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top