fbpx
ಸಮಾಚಾರ

ಅಫ್ಗನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ನಿಂತ ಕನ್ನಡದ ಸಂಸದ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳಿಂದ ಘರ್ಷಣೆ ಆರಂಭವಾದ ವೇಳೆ ಕನ್ನಡಿಗರೂ ಸಹ ಕಾಬೂಲ್​ನಲ್ಲಿ ಸಿಲುಕಿದ್ದು ಅಫ್ಘಾನಿಸ್ಥಾನದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕ ರಾಜ್ಯದ ನಾಗರೀಕರನ್ನು ತವರಿಗೆ ವಾಪಸ್ ಕರೆತರಲು ರಾಜ್ಯ ಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಮುಂದಾಗಿದ್ದಾರೆ.

 

 

ಜಿಸಿ ಚಂದ್ರಶೇಖರ್ ಅವರ ಅಧಿಕೃತ ಕಚೇರಿಯ ವತಿಯಿಂದ ಅಫ್ಘಾನ್​ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ 7359189712 ಸಹಾಯವಾಣಿ ತೆರೆಯಲಾಗಿದೆ. ಆಫ್ಗನ್ ನಲ್ಲಿ ಸಿಲುಕಿರುವ ಕನ್ನಡಿಗರು 7359189712 ಸಂಖ್ಯೆಗೆ ವಾಟ್ಸಾಪ್ ಅಥವಾ ಕರೆ ಮಾಡಿದರೆ ಅವರನ್ನು ಆದಷ್ಟು ಬೇಗ ಕರ್ನಾಟಕಕ್ಕೆ ಕರೆತರುವ ಎಲ್ಲಾ ವ್ಯವಸ್ಥೆಯನ್ನು ಜಿ.ಸಿ ಚಂದ್ರಶೇಖರ್ ಅವರು ಮಾಡಿಸುತ್ತಾರೆ.

 

ಹೆಲ್ಪ್​ಲೈನ್ ಮೂಲಕ ಭಾರತಕ್ಕೆ ವಾಪಾಸ್ ಬರಲು ಬಯಸುವ ಅಫ್ಘಾನ್​ನಲ್ಲಿರುವ ಭಾರತೀಯರು 7359189712 ಸಂಖ್ಯೆ ಸಂಪರ್ಕಿಸಬಹುದು ಎಂದು ಸ್ವತಃ ಜಿ.ಸಿ ಚಂದ್ರಶೇಖರ್ ಅವರೇ ಮಾಹಿತಿ ನೀಡಿದ್ದಾರೆ. ಕುರಿತಂತೆ ಸಂಸದ ಜಿಸಿ ಚಂದ್ರಶೇಖರ್ ಟ್ವೀಟ್ ಮಾಡಿದ್ದು ” ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವವರ ನಮ್ಮವರಿಗಾಗಿ ಸಹಾಯವಾಣಿ ,ನಮ್ಮವರ ನೆರವಿಗಾಗಿ ನಮ್ಮ ಟೀಮ್ ಜಿ.ಸಿ ಸಿದ್ಧವಾಗಿದೆ.ಕರೆ ಮಾಡಿ ಅಥವಾ ವಾಟ್ಸ್ ಆಪ್ ಸಹಾಯವಾಣಿ ಸಂಖ್ಯೆ :೭೩೪೯೧೮೯೭೧೨ ” ಎಂದು ತಿಳಿಸಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top