fbpx
ಸಮಾಚಾರ

ಕಿಚ್ಚ ಸುದೀಪ್ ಗೆ ವಿಶೇಷವಾಗಿ ಬರ್ತಡೇ ವಿಶ್ ಮಾಡಿದ ಚಿನ್ನದ ಹುಡುಗ ನೀರಜ್: ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ನೀರಜ್ ಹೇಳಿದ್ದೇನು ಗೊತ್ತಾ?

ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡವರು ಭಾರತದ ಕ್ರೀಡಾಪಟು ನೀರಜ್ ಚೋಪ್ರಾ.  ‘ಚಿನ್ನದ ಹುಡುಗ’ ನೀರಜ್ ಚೋಪ್ರಾ ಇದೀಗ ಕನ್ನಡ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

 

 

 

ವಿಡಿಯೋ ಮೂಲಕ ಕಿಚ್ಚ ಸುದೀಪ್‌ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ ನೀರಜ್ ಚೋಪ್ರಾ. ”ವಿಶ್ ಯೂ ಹ್ಯಾಪಿ ಬರ್ತಡೇ ಸುದೀಪ್‌ಜಿ. ನಿಮ್ಮ ಸಿನಿಮಾಗೆ ಆಲ್ ದಿ ಬೆಸ್ಟ್. ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದು ವಿಡಿಯೋದಲ್ಲಿ ನೀರಜ್ ಚೋಪ್ರಾ ಹೇಳಿದ್ದಾರೆ.

ನಾಳೆ (ಸೆಪ್ಟೆಂಬರ್​ 2) ‘ಡೆಡ್​ ಮ್ಯಾನ್​ ಆ್ಯಂಥಮ್​’ ರಿಲೀಸ್​ ಆಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ‘ವಿಕ್ರಾಂತ ರೋಣ’ ಟ್ವಿಟರ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ನೀರಜ್​ ಚೋಪ್ರಾ ಅವರು ಸುದೀಪ್​ಗೆ ಬರ್ತ್​ಡೆ ವಿಶ್​ ಮಾಡಿದ್ದಾರೆ. ಜತೆಗೆ ಅವರ ಸಿನಿಮಾಗೂ ಆಲ್​ ದಿ ಬೆಸ್ಟ್ ಹೇಳಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿ ಜತೆ ಅಚ್ಚರಿ ಕೂಡ ಹೊರ ಹಾಕಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top