fbpx
ಸಮಾಚಾರ

ಪುತ್ರನಿಗೆ ರಾಯನ್ ಹೆಸರು ಇಟ್ಟಿದ್ದಕ್ಕೆ ಮೇಘನಾ ವಿರುದ್ಧ ಹಿಂದುತ್ವ ಕಾರ್ಯಕರ್ತರ ವಿರೋಧ: ರಾಯನ್ ನಾಮಕರಣ ವಿವಾದಕ್ಕೆ ಮೇಘನಾ ಖಡಕ್ ರಿಪ್ಲೇ

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರನಿಗೆ ಶುಕ್ರವಾರ ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಈ ಕುರಿತಂತೆ ಕೆಲವು ಮಂದಿ ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ ನೀಡಿದ್ದಾರೆ. 

ಮೇಘನಾ ರಾಜ್ ಹೇಳಿದ್ದೇನು?
ತಾಯಿಯಾಗಿ ಮಗನಿಗೆ ಯಾವುದು ಉತ್ತಮವೋ ಅದನ್ನೇ ಮಾಡುವುದು ಮುಖ್ಯವಾಗುತ್ತದೆ. ಪಾಲಕರು ಎರಡು ಜಗತ್ತಿನಲ್ಲಿ ಇರುವ ಉತ್ತಮವಾದುದನ್ನು ಎಂಜಾಯ್ ಮಾಡಿದಂತೆ ಯಾಕೆ ಮಾಡಬಾರದು? ನಾವು ಮಗನಿಗೋಸ್ಕರ, ನಮ್ಮ ಕುಟುಂಬಕ್ಕೋಸ್ಕರ ಮಾಡಿದ ಪ್ರಾರ್ಥನೆ ವಿಚಾರದಲ್ಲಿ ಜನರಿಗೆ ಧರ್ಮ, ಜಾತಿ ವಿಷಯವಾಗಿ ಅಗೌರವವಿರಬಹುದು. ನಾವು ಮೇಲಿರುವ ಎಲ್ಲ ದೇವರ ಬಳಿ ಆಶೀರ್ವಾದ ಬೇಡುತ್ತೇವೆ. ಅದು ನನಗೆ ಎರಡು ಮಾರ್ಗದಲ್ಲಿ ಮಾಡೋದು ಮುಖ್ಯವಾಗಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಮಾನವೀಯತೆ ಮುಖ್ಯ ಎಂದು ನನ್ನ ಮಗನ ತಂದೆ, ನಮ್ಮ ರಾಜ ನಂಬಿದ್ದರು.

ಎರಡು ಸಂಪ್ರದಾಯಗಳನ್ನು ಆಚರಿಸಿದ್ದೇವೆ. ಸಂಸ್ಕೃತದಲ್ಲಿ ರಾಯನ್ ಎಂದರೆ ರಾಜ ಎಂದರ್ಥ. ಆಂತೆಯೇ ರಾಯನ್ ಎಂಬ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ರೀತಿಯಲ್ಲಿ ಉಚ್ಛಾರಣೆ ಇರಬಹುದು, ಆದರೆ ಅರ್ಥ ಒಂದೇ. ನಮ್ಮ ಯುವರಾಜನನ್ನು ರಾಯನ್ ಸರ್ಜಾ ಎಂದು ಪರಿಚಯಿಸುತ್ತಿದ್ದೇವೆ. ನಮ್ಮ ರಾಯನ್ ಸರ್ಜಾ ಅವನ ತಂದೆಯಂತೆ ಬೆಳೆಯಬೇಕು. ಚಿರು ಜನರನ್ನು ಮತ್ತು ಅವರು ಮಾಡುತ್ತಿದ್ದ ಮಾನವೀಯ ಒಳ್ಳೆಯ ಕೆಲಸಗಳನ್ನು ಪ್ರೀತಿಸುತ್ತಿದ್ದರು. ಜನರ ಹಿನ್ನೆಲೆ ನೋಡಿ ಪ್ರೀತಿಸುತ್ತಿರಲಿಲ್ಲ ಎಂದು ಮೇಘನಾ ಬರೆದುಕೊಂಡಿದ್ದಾರೆ.

ಈ ಮೂಲಕ ಅವರು ನನ್ನ ಮಗನಿಗೆ ಎರಡು ಧರ್ಮಗಳ ದೇವರ ಆಶಿರ್ವಾದ ಬೇಕು ಹಾಗಾಗಿ ಎರಡೂ ಧರ್ಮಗಳ ಸಂಪ್ರದಾಯ ಪಾಲಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಅನಾವಶ್ಯಕವಾಗಿ ಚರ್ಚೆ ಮಾಡಬೇಡಿ ಎಂದು ನೆಟ್ಟಿಗರ ವಿರುದ್ಧ ಕಿಡಿ ಕಾರಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top