fbpx
ಸಮಾಚಾರ

ಸೆಪ್ಟೆಂಬರ್ 08: ನಾಳೆಯ ಪಂಚಾಂಗ ಮತ್ತು ದಿನದ ರಾಶಿ ಭವಿಷ್ಯ

ಸೆಪ್ಟೆಂಬರ್ 8, 2021 ಬುಧವಾರ
ವರ್ಷ : 1943 ಪ್ಲಾವ
ತಿಂಗಳು : ಭಾದ್ರಪದ, ಪಕ್ಷ : ಶುಕ್ಲಪಕ್ಷ

Panchangam
ತಿಥಿ : ದ್ವಿತೀಯಾ 2:33 am
ನಕ್ಷತ್ರ : ಉತ್ತರ 3:55 pm
ಯೋಗ : ಶುಭ 11:37 pm
ಕರಣ : ಬಾಲವ 3:36 pm ಕುಲವ 2:33 am

Time to be Avoided
ರಾಹುಕಾಲ : 12:17 pm – 1:48 pm
ಯಮಗಂಡ : 7:43 am – 9:14 am
ದುರ್ಮುಹುರ್ತ : 11:52 am – 12:41 pm
ವಿಷ : 11:50 pm – 1:20 am
ಗುಳಿಕ : 10:45 am – 12:17 pm

Good Time to be Used
ಅಮೃತಕಾಲ : 9:04 am – 10:35 am

Other Data
ಸೂರ್ಯೋದಯ : 6:08 am
ಸುರ್ಯಾಸ್ತಮಯ : 6:25 pm
ರವಿರಾಶಿ : ಸಿಂಹ
ಚಂದ್ರರಾಶಿ : ಕನ್ಯ
 

 

ರಾತ್ರಿಯ ಕತ್ತಲಿನ ಅನುಭವವಾಗಿದ್ದರೆ ಮಾತ್ರ ಬೆಳಕಿನ ಆಹ್ಲಾದ ಮನಸ್ಸಿಗೆ ನಾಟುವುದು. ಹಾಗಾಗಿ ಈ ದಿನ ಸುಂದರ ದಿನವನ್ನು ಕಾಣುವಿರಿ. ಜಗತ್ತು ವಿಶಾಲವಾಗಿದೆ. ತಾನು ಒಂಟಿ ಅಲ್ಲ ಎನ್ನುವ ಮನೋಭಾವನೆ ನಿಮ್ಮಲ್ಲಿ ಮೂಡುವುದು.

ನಿಮ್ಮ ತಪ್ಪಿನ ಅರಿವು ನಿಮಗೆ ಆಗಿದೆ. ಆದರೆ ಜನರು ಪದೇ ಪದೇ ನಿಮಗೆ ಉಪದೇಶ ನೀಡುವುದನ್ನು ಸಹಿಸಿಕೊಳ್ಳಲಾರಿರಿ. ಅವಮಾನದಿಂದ ಕುಗ್ಗಿ ಹೋಗುವಿರಿ. ಫೀನಿಕ್ಸ್‌ ಪಕ್ಷಿಯಂತೆ ಮೈಕೊಡವಿ ಎದ್ದು ನಿಲ್ಲಿ ದೈವ ಸಹಾಯ ಮಾಡುವುದು.

ಇಂದು ನೀವು ನಿಮ್ಮ ವಿಚಾರಧಾರೆಯಿಂದ ಬಹು ಎತ್ತರಕ್ಕೆ ಏರಬಲ್ಲಿರಿ. ಆದರೆ ಅದಕ್ಕೆ ಹಲವು ಅಡೆತಡೆಗಳಿದ್ದು ಅವುಗಳ ಕಡೆ ಮೊದಲು ಗಮನ ನೀಡಿರಿ. ಈಗ ಧೈರ್ಯಗೆಡುವ ಬದಲು ಧೈರ್ಯದಿಂದ ಕಾರ್ಯ ಪ್ರವೃತ್ತರಾಗಿರಿ.

ನಿಮ್ಮ ಹಳೆಯ ಸ್ನೇಹಿತನ ಆಗಮನದಿಂದ ಮನಸ್ಸಿಗೆ ಬಲ ಬರಲಿದೆ. ಅನಾವಶ್ಯಕ ಚಿಂತೆ ಮಾಡದಿರಿ. ಪ್ರಯಾಣ ಕಾಲದಲ್ಲಿ ಎಚ್ಚರಿಕೆ ಅಗತ್ಯ. ಖರ್ಚಿಗೆ ತಕ್ಕಷ್ಟು ಹಣಕಾಸು ಒದಗಿ ಬರುವುದು.

 

ಬಂಧುಬಾಂಧವರೆಂಬ ವಿಶ್ವಾಸದ ಮೇಲೆ ಈ ಹಿಂದೆ ಮಾಡಿದ ಸಹಾಯವೇ ನಿಮಗೆ ಇಂದು ತೊಂದರೆಯಾಗಿದೆ. ಆರ್ಥಿಕ ಸಮಸ್ಯೆ ಹೆಚ್ಚಾಗಿದ್ದು ಈಗಿನ ವಾತಾವರಣದಲ್ಲಿ ಯಾರಿಂದಲೂ ಸಹಾಯ ಸಿಗುತ್ತಿಲ್ಲ ಎಂದು ಕೊರಗದಿರಿ. ದೈವಕ್ಕೆ ಮೊರೆ ಹೋಗಿರಿ.

 

ತುಂಬಾ ದಿನಗಳಿಂದ ಆಗಬೇಕಿದ್ದ ಕೆಲಸಗಳು ಇಂದು ಕೈಗೂಡುವ ಸಾಧ್ಯತೆ ಇದೆ. ಆದಾಗ್ಯೂ ಮನಸಿಗೆ ಒಂದು ರೀತಿಯ ಕಿರಿಕಿರಿ ಅನುಭವಿಸುವಿರಿ. ಮನೋನಿಯಾಮಕ ರುದ್ರದೇವರ ಭಜಿಸಿರಿ. ಗುರುವಿನ ಸ್ತೋತ್ರ ಪಠಿಸಿರಿ.

 

ಮಾತು ಮನ ಕೆಡಿಸಿತು ತೂತು ಒಲೆ ಕೆಡಿಸಿತು ಎನ್ನುವಂತೆ ಆವೇಶದ ಭರದಲ್ಲಿ ಮಾತನಾಡಿದ ತಪ್ಪಿಗಾಗಿ ಉತ್ತಮ ಸ್ನೇಹ ಬಾಂಧವ್ಯ ಕಳಚಿಕೊಳ್ಳುವುದು. ಹಾಗಾಗಿ ಮಾಡಿದ ತಪ್ಪನ್ನು ಮಾಡುವುದು ವಿಹಿತವಲ್ಲ. ತಿದ್ದಿಕೊಂಡು ನಡೆಯಿರಿ.

 

ನೀವು ನಿಮ್ಮ ಮನೆಯಲ್ಲಿಯೇ ಕುಳಿತು ಹೊರಗಿನ ವ್ಯವಹಾರವನ್ನು ಬಹು ಚಾಕಚಕ್ಯತೆಯಿಂದ ಮುಗಿಸಿಕೊಳ್ಳುವಿರಿ. ಹಾಗೇ ಕೆಲಸ ಮಾಡಿಸಿಕೊಳ್ಳುವ ಗುಟ್ಟು ನಿಮಗೆ ಒಬ್ಬರಿಗೆ ತಿಳಿದಿರುವುದು. ಇದರಿಂದ ಇತರೆಯವರು ಅಸೂಯೆ ಪಡುವರು.

 

ಮಾಡಿದವರ ಪಾಪ ಆಡಿದವರ ಮೇಲೆ ಎನ್ನುವಂತೆ ನಿಮಗೆ ಸಂಬಂಧ ಪಡದವರ ವಿಚಾರವಾಗಿ ಮಾತನಾಡದಿರಿ. ಇದರಿಂದ ಈದಿನ ಎಲ್ಲರ ಎದುರು ಇರಸು-ಮುರಸಿಗೆ ಒಳಗಾಗುವಿರಿ. ನಿಮ್ಮ ಧಾರ್ಮಿಕ ನಿಷ್ಠೆ ನಿಮ್ಮನ್ನು ಕಾಪಾಡುವುದು.

ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎನ್ನುವಂತೆ ಈದಿನ ಗುಣವಂತ ಜನರ ಸಂಪರ್ಕ ಏರ್ಪಡುವುದು. ಹೊಸ ಹೊಸ ವಿಷಯಗಳನ್ನು ಅರಿಯುವಿರಿ. ಮನೆಯ ಸದಸ್ಯರು ನಿಮ್ಮ ಕಾರ್ಯಗಳಿಗೆ ಸಹಕಾರಿಯಾಗಿ ನಿಲ್ಲುವರು.

 

 

ನಡೆಯುವ ವ್ಯಕ್ತಿ ಎಡುವುದು ಸಹಜ. ಹಾಗಂತ ಮನೆಯಲ್ಲಿಯೇ ಕುಳಿತಿರಲು ಆಗುವುದಿಲ್ಲ. ಆದರೆ ಪ್ರಯಾಣಿಸುವಾಗ ಶ್ರೀ ಲಕ್ಷ್ಮೀನರಸಿಂಹ ದೇವರನ್ನು ನೆನೆಯಿರಿ. ಗುರುವಿನ ಶ್ರೀರಕ್ಷೆ ಇರುವುದರಿಂದ ಹೆಚ್ಚಿನ ತೊಂದರೆ ಆಗುವುದಿಲ್ಲ.

 

ನಿಮ್ಮ ಮಾತಿನಲ್ಲಿನ ಅರ್ಥಪೂರ್ಣ ವಿನಯದಿಂದ ಗೆಲುವಿದೆ. ವಿನಯಶಾಲಿಯೇ ವಿಜಯಶಾಲಿ ಎಂಬುದು ನಿಮಗೆ ಮನದಟ್ಟಾಗುವುದು. ಇದು ಎಲ್ಲ ರಂಗದಲ್ಲಿರುವವರಿಗೂ ಅನ್ವಯಿಸುವಂತಹ ಮಾತಾಗಿರುತ್ತದೆ. ಹಣದ ಸಹಾಯ ಸಕಾಲದಲ್ಲಿ ದೊರೆಯುವುದು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top