ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ವಿಚ್ಛೇದನ ಪಡೆದಿದ್ದಾರೆ ಎಂದು ವರದಿಯಾಗಿದೆ. ವರ್ಷಗಳ ಹಿಂದೆ ಗಬ್ಬರ್ ಸಿಂಗ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಅಷ್ಟೇ ಅಲ್ಲದೆ ಆ ಬಳಿಕ ಪತ್ನಿ ಜೊತೆ ಧವನ್ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇಬ್ಬರು ಡೈವೋರ್ಸ್ ಪಡೆದಿದ್ದಾರೆ ಎನ್ನಲಾಗಿದೆ. ಇದನ್ನು ಪುಷ್ಠೀಕರಿಸುವಂತೆ ಆಯೇಷಾ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತಮ್ಮ ಆಯಿಷಾ ಮುಖರ್ಜಿ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸುದ್ದಿಯನ್ನು ಆಯಿಷಾ ಅವರೇ ದೃಢಪಡಿಸಿದ್ದು ಆಕೆಯ ಮೂಲ ಪ್ರೊಫೈಲ್ ಹೆಸರಿನ ಆಯಿಷಾ ಧವನ್ ಸೋಷಿಯಲ್ ಮೀಡಿಯಾ ಸೈಟ್ ನಿಂದ ಡಿಲೀಟ್ ಆಗಿದೆ. ಈ ಸುದ್ದಿಯನ್ನು ಸುದ್ದಿಸಂಸ್ಥೆಗೆ ಮೂಲಗಳು ಕೂಡ ಖಚಿತಪಡಿಸಿವೆ.
ಇನ್ನು ಆಯೆಶಾ ಅವರಿಗೆ ಇದು ಎರಡನೇ ವಿವಾಹ. ಇದಕ್ಕೂ ಮೊದಲು ಆಸ್ಟ್ರೇಲಿಯಾ ಮೂಲದ ವ್ಯಾಪಾರಿ ಒಬ್ಬರನ್ನು ಮದುವೆಯಾಗಿದ್ದರು. ಅವರೊಟ್ಟಿಗೆ ಇಬ್ಬರು ಹೆಣ್ಣು ಮಕ್ಕಳನ್ನೂ ಪಡೆದಿದ್ದರು. ಬಳಿಕ ಇಬ್ಬರನ್ನೂ ತಮ್ಮದೇ ಮಕ್ಕಳನ್ನಾಗಿ ಶಿಖರ್ ಧವನ್ ಸ್ವೀಕರಿಸಿದ್ದರು. ಇದಾದ ನಂತರ ಧವನ್ ಮತ್ತು ಆಯೆಶಾ ದಂಪತಿಗೆ ಗಂಡು ಮಗು ಜನಿಸಿ, ಮಗನಿಗೆ ಜೊರಾವರ್ ಎಂದು ಹೆಸರಿಟ್ಟಿದ್ದರು. ಇವರಿಬ್ಬರ ವಿಚ್ಛೇದನ ಕುರಿತಾಗಿ ಈ ಹಿಂದೆ ವರದಿಗಳಾಗಿತ್ತು. ಈಗ ಆಯೆಶಾ ಬರೆದಿರುವ ಪೋಸ್ಟ್ ಮೂಲಕ ಖಾತ್ರಿಯಾಗಿದೆ.
“ವಿಚ್ಛೇದನ ಎಂಬುದು ಬಹಳಾ ಕೆಟ್ಟ ಪದ ಎಂದು ನಾನು ಭಾವಿಸಿದ್ದೆ. ಆದರೆ, ನನ್ನ ಜೀವನದಲ್ಲಿ ಎರಡು ಬಾರಿ ವಿಚ್ಛೇದನ ಪಡೆಯುವಂತ್ತಾಗಿದೆ. ಈ ಪದಗಳು ಎಷ್ಟು ಬಲಿಷ್ಠವಾಗಿರುತ್ತವೆ ಮತ್ತು ನಮ್ಮ ಜೀವನದ ಭಾಗವಾಗಿರುತ್ತವೆ ಎಂಬುದು ತಮಾಷೆಯೇ ಸರಿ. ಮೊದಲ ಬಾರಿ ವಿಚ್ಛೇದನ ಪಡೆದಾಗ ನಾನು ಬಹಳಾ ಹೆದರಿದ್ದೆ. ಸೋತ ಅನುಭವವಾಗಿತ್ತು. ನಾನೇನೋ ತಪ್ಪು ಮಾಡಿದ್ದೇನೆ ಎಂದನ್ನಿಸಿತ್ತು. ವಿಚ್ಛೇದನ ನಿಜಕ್ಕೂ ಕೆಟ್ಟ ಪದ,” ಎಂದು ಆಯೆಶಾ ತಮ್ಮ ಇನ್‌ಸ್ಟಾಗ್ರಾಮ್ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
