fbpx
ಸಮಾಚಾರ

‘ನೀನಿಲ್ಲದೇ ಇರಲು ಆಗುತ್ತಿಲ್ಲ’- ಅಣ್ಣನನ್ನು ನೆನೆದು ಭಾವುಕರಾದ ನಟ ಧ್ರುವ ಸರ್ಜಾ

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಅವರು 2020ರ ಜೂನ್ 7ರಂದು ನಮ್ಮೆಲ್ಲರನ್ನು ಅಗಲಿದರು. ಇನ್ನೂ ಚಿಕ್ಕ ವಯಸ್ಸಿನಲ್ಲೇ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿದ್ದು ಚಿತ್ರರಂಗಕ್ಕೆ ಶಾಕ್ ನೀಡಿತ್ತು. ಹಾಗೆಯೇ, ಚಿರು ಕುಟುಂಬದವರು ಈಗಲೂ ಆ ನೋವಿನಿಂದ ಹೊರಬರಲು ಆಗುತ್ತಿಲ್ಲ. ಈಚೆಗೆ ಚಿರು ಸಹೋದರ ನಟ ಧ್ರುವ ಸರ್ಜಾ ಅವರು ಒಂದು ವಿಡಿಯೋ ಶೇರ್ ಮಾಡಿಕೊಂಡು ಭಾವುಕರಾಗಿದ್ದಾರೆ.

 

 

View this post on Instagram

 

A post shared by Dhruva Sarja (@dhruva_sarjaa)

;

 

ಸೋಶಿಯಲ್​ ಮೀಡಿಯಾದಲ್ಲಿ ಧ್ರುವ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಬಾಲ್ಯದಿಂದ ಹಿಡಿದು ಚಿರು ನಿಧನದವರೆಗೂ ಅಣ್ಣ-ತಮ್ಮ ಜೊತೆಯಾಗಿ ಕಳೆದ ಅನೇಕ ಪ್ರೀತಿಯ ಕ್ಷಣಗಳು ಈ ವಿಡಿಯೋದಲ್ಲಿ ಸೆರೆಯಾಗಿವೆ. ‘ಮಿಸ್​ ಯೂ ಚಿರು. ನಿನ್ನನ್ನು ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ’ ಎಂದು ಇದಕ್ಕೆ ಅವರು ಕ್ಯಾಪ್ಷನ್​ ನೀಡಿದ್ದಾರೆ. ಅವರಿಗೆ ಸಮಾಧಾನ ಮಾಡುವ ರೀತಿಯಲ್ಲಿ ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಈ ವೀಡಿಯೋದಲ್ಲಿ ಧ್ರುವ ಚಿರುಗೆ ಊಟ ಮಾಡಿಸುತ್ತಿವುದು, ಇಬ್ಬರು ಚೆಸ್ ಆಡುತ್ತಿರುವುದು ಮತ್ತು ಚಿರು ಧ್ರುವ ತಲೆಗೆ ಎಣ್ಣೆ ಹಚ್ಚುತ್ತಿರುವ ವೀಡಿಯೋ ಇದೆ. ಈಗೇ ಚಿಕ್ಕವಯಸ್ಸಿನಿಂದ ಚಿರು ಬದುಕಿರುವವರೆಗೂ ಕಳೆದ ಸಂತೋಷದ ಫೋಟೋಗಳನ್ನು ಮತ್ತು ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಧ್ರುವ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top